suddibindu.in
Kumta :ಕುಮಟಾ : ರಾಷ್ಟ್ರೀಯ ಹೆದ್ದಾರಿ 66ರ ಬರ್ಗಿ ಬಳಿ ಇನೋವಾ ಕ್ರಿಸ್ಟ್ ಹಾಗೂ ಕಂಟೇನರ್ ನಡುವೆ ಮುಖಾಮುಖಿ ಅಪಘಾತ ಉಂಟಾಗಿ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಅಂಕೋಲಾ ಕಡೆಯಿಂದ ಕುಮಟಾ ಕಡೆ ಚಲಿಸುತ್ತಿದ್ದ ಕ್ರಿಸ್ಟ್ ಕಾರು ಹಾಗೂ ಕುಮಟಾ ಕಡೆಯಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಕಂಟೇನರ್ ನಡುವೆ ಈ ಅಪಘಾತ ಸಂಬಂಧಿಸಿದೆ. ಕಳೆದ ಒಂದು ತಿಂಗಳ ಹಿಂದೆ ಬರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡಕುಸಿತ ಉಂಟಾಗಿದ್ದು, ಹೆದ್ದಾರಿಯಲ್ಲಿ ಬಿದ್ದಿರುವ ಮಣ್ಣನ್ನ ಐಆರ್ಬಿ ಕಂಪನಿ ತೆರವು ಮಾಡದೆ ಇರುವ ಕಾರಣ ಈ ಅವಘಡ ಉಂಟಾಗಿದೆ.
ಇದನ್ನೂ ಓದಿ
- “ಐ ಲವ್ ಯು” ಅಂತಾ ಹೇಳುವುದು ಲೈಂಗಿಕ ಉದ್ದೇಶವಲ್ಲ/ಹೈಕೋರ್ಟ್
- ವಾಯುವ್ಯ ಕರ್ನಾಟಕ ಸಾರಿಗೆ ಶಿರಸಿ ವಿಭಾಗದಲ್ಲಿ ಚಾಲಕರ ನೇಮಕಾತಿಗೆ ಅರ್ಜಿ ಆಹ್ವಾನ
- 21 ವರ್ಷ ಪೂರೈಸಿದ ಆರ್.ವಿ. ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ : ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿ.!
ಅಪಘಾತದಲ್ಲಿ ಕ್ರಿಸ್ಟ್ ಕಾರ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಇನ್ನೂ ಕಂಟೇನರ್ ಲಾರಿ ಚಾಲಕ ಪರಾರಿಯಾಗಿದ್ದಾನೆ. ಅಪಘಾತ ಉಂಟಾಗಿರುವ ಕಾರಣ ಉಳಿದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.ನೂರಾರು ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದೆ.
ಅಪಾಘಾತದ ಬಗ್ಗೆ ಮೊದಲೆ ಎಚ್ಚರಿಸಿದ್ದ “ಸುದ್ದಿಬಿಂದು”
ಬರ್ಗಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಗುಡ್ಡಕುಸಿತ ಉಂಟಾಗಿ ಇದುವರೆಗೆ ಮಣ್ಣು ತೆರವು ಮಾಡದೆ ಇರುವ ಬಗ್ಗೆ ನಿಮ್ಮ “ಸುದ್ದಿಬಿಂದು” ‘ಹೆದ್ದಾರಿಯಲ್ಲಿನ ಮಣ್ಣು ತೆರವು ಯಾವಾಗ.? IRB ಕಂಪನಿಯಲ್ಲಿ ಜೆಸಿಬಿ ಇಲ್ಲವೆ..?’ ಶೀರ್ಷಿಕೆಯಡಿಯಲ್ಲಿ ಸುದ್ದಿ ಮಾಡುವ ಮೂಲಕ ಎಚ್ಚರಿಕೆ ನೀಡಿತ್ತು. ಆದರೂ ಸಹ ಐಆರ್ಬಿ ಕಂಪನಿ ಎಚ್ಚೇತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿರುವುದೆ ಈ ಅಪಘಾತಕ್ಕೆ ಕಾರಣವಾಗಿದೆ.ಇನ್ನಾದ್ದರೂ ಸಹ ಐಆರ್ಬಿ ಕಂಪನಿ ಎಚ್ಚೇತ್ತುಕೊಳ್ಳದೆ ಹೋದರೆ ಇನ್ನಷ್ಟು ಅನಾಹುತ ಉಂಟಾಗುವುದರಲ್ಲಿ ಅಚ್ಚರಿಯಿಲ್ಲ.