suddibindu.in
ಚಿಕ್ಕಮಗಳೂರು : ಫಾಲ್ಸ್‌ನಲ್ಲಿ ಬಂಡೆ ಮೇಲೆನಿಂತು ಪ್ರವಾಸಿಗನೋರ್ವ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಬಂಡೆ ಮೇಲಿಂದ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಹೆಬ್ಬೆ ಫಾಲ್ಸ್‌ನಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಯುವಕ ಶ್ರವಣ್ (25) ಮೃತ ದುರ್ದೈವಿಯಾಗಿದ್ದಾನೆ. ಹೈದರಾಬಾದ್ ನಿಂದ ಕಾಫಿನಾಡಿನ ಪ್ರವಾಸ ಕೈಗೊಂಡಿದ್ದ ಇಬ್ಬರು ಯುವಕರಲ್ಲಿ ಓರ್ವ ಸೆಲ್ಫಿ ಹುಚ್ಚಿಗೆ ಬಲಿಯಾಗಿದ್ದಾನೆ. ಬೈಕ್‌ನಲ್ಲಿ ಹೆಬ್ಬೆ ಫಾಲ್ಸ್ ಗೆ ಇಬ್ಬರು ಸ್ನೇಹಿತರು ತೆರಳಿದ್ದರು.ಹೆಬ್ಬೆ ಫಾಲ್ಸ್ ನಲ್ಲಿ ಸೆಲ್ಪಿ ತೆಗೆಯುವ ವೇಳೆಯಲ್ಲಿ ಕಾಲು ಜಾರಿ ಬಿದ್ದು ಶ್ರವಣ್ ಸಾವನ್ನಪ್ಪಿದ್ದಾನೆ. ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.