suddibindu.in
ದಾಂಡೇಲಿ : ನಗರದ ವನಶ್ರೀ ನಗರದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮನೆ ಕಳ್ಳತನ ಮಾಡಿದ ಮೂವರು ಆರೋಪಿಗಳಾದ ನಗರದ ಮಾರುತಿ ನಗರದ ನಿವಾಸಿಗಳಾದ ಅಶೋಕ ಗುರವ ಮತ್ತು ಫೈರೋಜ್ ಅಬ್ದುಲ್ ಸತ್ತಾರ್ ದೌಲತ್ತಿ ಹಾಗೂ ಗಾಂಧಿನಗರದ ನಿವಾಸಿ ಮೈಕಲ್ ಬನ್ನಿ ಅಪ್ಪು ಕಕ್ಕೇರಿ ಇವರನ್ನು ಬಂಧಿಸಿ, ಇವರು ಕಳ್ಳತನ ಮಾಡಿದ ಬಂಗಾರದ ಉಂಗುರ -2, ಬೆಳ್ಳಿಯ ಕಾಲು ಚೈನ್ :6 ಜೊತೆ, ಬೆಳ್ಳಿಯ ಕೈಬಳೆ: 4, ವಾಚ್:3, ಬೆಳ್ಳಿಯ ದೀಪ ಹಚ್ಚುವ ಹಣತೆ : 1, ಸಣ್ಣ ಡಬ್ಬಾ:1 ಮತ್ತು ರೂ: 3,650/- ನಗದು ಹಾಗೂ ಈ ಕೃತ್ಯಕ್ಕೆ ಬಳಸಲಾದ ದ್ವಿಚಕ್ರ ವಾಹನ ಕೆಎ:65, ಕೆ: 2945 ನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ
- TV9 ಲೈಫ್ ಸ್ಟೈಲ್ ಆಟೋ ಮೊಬೈಲ್ & ಫರ್ನಿಚರ್ ಎಕ್ಸ್ಪೋಗೆ ಚಾಲನೆ ಕೊಟ್ಟ ನಟಿ ಸಂಜನಾ ಹಾಗೂ ನಟ ವಿರಾಟ್
- ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ವೀಣಾ ಗುನಗಿಯವರಿಗೆ ಗುನಗಿ ಸಮಾಜ ಸಹಾಯವಾಣಿ ಸಂಘದಿಂದ ಸನ್ಮಾನ
- ಸ್ಕೂಟಿ ಹಿಂಬದಿಗೆ ಡಿಕ್ಕಿ ಹೊಡೆದ ಕಾರು : ಸ್ಕೂಟಿ ಸವಾರ ಗಂಭೀರ
ವನಶ್ರೀ ನಗರದ ಶಂಶುನ್ನಿಸಾ ಅಬ್ದುಲ್ ಮುತಲಿಬ್ ಶೇಖ್ ಅವರ ಮನೆಯಲ್ಲಿ ಕಳ್ಳತನವಾಗಿರುವ ಕುರಿತಂತೆ ಮೇ 26ರಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ:ವಿಷ್ಣುವರ್ಧನ್.ಎನ್, ಹೆಚ್ಚುವರಿ ಪೊಲೀಸ್ ಅಧಿಕರಾದ ಸಿ.ಟಿ ಜಯಕುಮಾರ್, ಮತ್ತು ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರುಗಳ ಮಾರ್ಗದರ್ಶನದಲ್ಲಿ ಸಿಪಿಐ ಭೀಮಣ್ಣ ಎಂಸೂರಿ ಅವರ ನೇತೃತ್ವದಲ್ಲಿ ಪಿಎಸ್ಐ ಗಳಾದ ಐ.ಆರ್.ಗಡ್ಡೆಕರ್ ಮತ್ತು ರವೀಂದ್ರ ಬಿರಾದರ್, ಎಎಸ್ಐಗಳಾದ ಬಸವರಾಜ ಒಕ್ಕುಂದ, ನಾರಾಯಣ ರಾಥೋಡ್ ಮತ್ತು ಪೊಲೀಸ್ ಸಿಬ್ಬಂದಿಗಳು ಹಾಗೂ ಜಿಲ್ಲಾ ಕೇಂದ್ರದ ಸಿಡಿಆರ್ ವಿಭಾಗದ ಸಿಬ್ಬಂದಿಗಳಾದ ಉದಯ ಗುನಗ, ರಮೇಶ್ ನಾಯ್ಕ ಅವರನ್ನು ಒಳಗೊಂಡ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿತ್ತು.
ಈ ಬಗ್ಗೆ ದಾಂಡೇಲಿ ನಗರ ಠಾಣೆಯು ಮಾಧ್ಯಮಕ್ಕೆ ಅಧಿಕೃತ ಮಾಹಿತಿಯನ್ನು ನೀಡಿದೆ.