ಸುದ್ದಿಬಿಂದು ಬ್ಯೂರೋ
ಕಾರವಾರ :
ಜಿಲ್ಲೆಯಲ್ಲಿ ಇರುವ ಪ್ರತಿಯೊಬ್ಬ ಅಧಿಕಾರಿಗಳು ಮೊದಲು ಬಡವರ ಕೆಲಸ ಮಾಡಬೇಕು,ಮಾಡಲು ಸಾಧ್ಯವಿಲ್ಲದೆ ಇದ್ದರೆ ಅಂತಹ ಅಧಿಕಾರಿಗಳು ಜಿಲ್ಲೆ ಬಿಟ್ಟು ಹೋಗಬಹುದು.ಕೆಲಸ ಮಾಡದ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೀನುಗಾರಿಕೆ‌ ಮತ್ತು ಬಂದರು ಇಲಾಖೆ ಸಚಿವ ಮಂಕಾಳು ವೈದ್ಯ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯ ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕುಡಿಯುವ ನೀರು,ಆರೋಗ್ಯ,ವಿದ್ಯುತ್,ಶಿಕ್ಷಣ,ಮೊದಲು ಆಧ್ಯತೆ ನೀಡಿ. ಅನೇಕ ಕಡೆ ಗ್ರಾಮೀಣ ಪ್ರದೇಶದಲ್ಲಿ ಇರುವ ಆಸ್ಪತ್ರೆಗಳಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ‌ ಕೊರತೆ ಇದೆ. ಅದನ್ನ ಮೊದಲು ಸರಿ ಪಡಿಸಬೇಕಿದೆ.

ಅಧಿಕಾರಿಗಳಿಂದ ಸಾಮಾನ್ಯ ಜನರ, ಬಡವರ ಕೆಲಸ ಆಗ ಬೇಕು, ಆಸ್ಪತ್ರೆಯಲ್ಲಿ ಜನರ ಸೇವೆ ಮಾಡುವ ವೈದ್ಯರು ಬೇಕು, ನಾನು ಡಾಕ್ಟರ್ ಅನ್ನುವವರು ಬೇಡ, ಯಾರಿಗೆ ಕೆಲಸ ಮಾಡಲು ಮನಸ್ಸಿಲ್ಲವೋ ಅಂತಹವರು, ಜಿಲ್ಲೆ ಬಿಟ್ಟು ಹೋಗಬಹುದು,ಒಳ್ಳೆ ಸೇವೆ ಕೊಟ್ಟರೆ ನೀವೆ ಹೋಗತ್ತೆವೆ ಅಂದರು ನಾವು ಕಳಸಲ್ಲ.ಒಳ್ಳೆ ಕೆಲಸ ಮಾಡುವವರಿಗೆ ನಾವು ಬೆಂಬಲ ನೀಡುತ್ತವೆ.