ಸುದ್ದಿಬಿಂದು ಬ್ಯೂರೋ
ಕಾರವಾರ :
ಕಳೆದ ಎರಡು ವರ್ಷದಲ್ಲಿ ಮೃತಪಟ್ಟಿರುವ 45 ಮೀನುಗಾರ ಕುಟುಂಬಕ್ಕೆ ಸಂಕಷ್ಟ ಪರಿಹಾರ ನಿಧಿಯಿಂದ ನೀಡಬೇಕಾದ ಪರಿಹಾರ ಹಣವನ್ನ ಹಿಂದಿನ ಸರಕಾರ ನೀಡದೆ ಇರುವ ಬಗ್ಗೆ ಮೀನುಗಾರಿಕಾ ಮತ್ತು ಬಂದರು ಸಚಿವ ಮಂಕಾಳು ವೈದ್ಯ ಅವರು ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಬಹಿರಂಗವಾಗಿದೆ‌.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಚಿವ ಮಂಕಾಳು ವೈದ್ಯ ಅವರು ಕಳೆದ ಎರಡು ವರ್ಷದಲ್ಲಿ ಎಷ್ಟು ಮೀನುಗಾರರು ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದರು. ಇದಕ್ಕೆ ಉತ್ತರಿಸಿದ ಮೀನುಗಾರಿಕಾ ಇಲಾಖೆಯ ಅಧಿಕಾರಿ ಜಿಲ್ಲೆಯಲ್ಲಿ ಒಟ್ಟು 45 ಮೀನುಗಾರರು ಮೃತಪಟ್ಟಿದ್ದಾರೆ ಎಂದರು. ಇದರಲ್ಲಿ ಎಷ್ಟು ಕುಟುಂಬಕ್ಕೆ ಪರಿಹಾರ ನೀಡಲಾಗಿದೆ ಎಂದು ಸಚಿವರು ಅಧಿಕಾರಿಗಳನ್ನ ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು ಇದುವರೆಗೆ ಯಾವ ಒಂದು ಕುಟುಂಬಕ್ಕೂ ಪರಿಹಾರ ನೀಡಲ್ಲ ಅಂದರು.

ಯಾಕೆ ಎರಡು ವರ್ಷವಾದ್ರೂ ಹಣ ಕೊಟ್ಟಿಲ್ಲ. ಏನಾಗಿದೆ. ಎಂದು ಸಚಿವರು ಅಧಿಕಾರಿಗಳ ತರಾಟೆಗೆ ತೆಗೆದುಕೊಂಡರು. ಸಚಿವರು ಗರಂ ಆದ ಬಳಿಕ ಸತ್ಯವನ್ನ ಬಾಯ್ ಬಿಟ್ಟ ಅಧಿಕಾರಿಗಳು ಸರ್ ಸರಕಾರ ಇದುವರೆ ಹಣ ಕೊಟ್ಟಿರಲಿಲ್ಲ‌. ಹೀಗಾಗಿ ನಾವು ಕೊಟ್ಟಿಲ್ಲ ಎಂದರು. ಹಿಂದೆ ನಮ್ಮ ಸರಕಾರ ಇದ್ದಾಗ ಅನಾಹುತದಲ್ಲಿ ಮೃತಪಟ್ಟ ಕುಟುಂಬಕ್ಕೆ 24 ಗಂಟೆಯಲ್ಲಿ ಅವರ ಮನೆಗೆ ಪರಿಹಾರ ಹಣ ನೀಡತ್ತಾ ಇದ್ದೀವಿ. ಆದರೆ ಹಿಂದೆ ಆಡಳಿತ ನಡೆಸಿದ ಸರಕಾರ ಎರಡು ವರ್ಷ ಆದರೂ ಮೃತಪಟ್ಟಿರುವ ಮೀನುಗಾರ ಕುಟುಂಬಕ್ಕೆ ಪರಿಹಾರ ನೀಡಲ್ಲ ಅಂದರ ಏನ ಅರ್ಥ, ಆ ಮೃತರ ಕುಟುಂಬಕ್ಕೆ ಅನುಕೂಲ ಆಗಲಿ ಎಂದು ಪರಿಹಾರ ಘೋಷಣೆ ಮಾಡಿದ್ದರೆ ಅದನ್ನೂ ಸಹ ಆ ಸರಕಾರದಿಂದ ಮಾಡೋದಕ್ಕೆ ಸಾಧ್ಯವಾಗಿಲ್ಲ ಅಂದರೆ ಆ ಕುಟುಂಬ ಹೊಣ್ಣೆಗೆ ಏನ ತಿನ್ನಬೇಕು, ನಿಜಕ್ಕೂ ಮೃತ ಕುಟುಂಬಕ್ಕೆ ಇದುವರಗೆ ಹಣ ನೀಡದೆ ಇರುವುದು ದುರಂತ ಎಂದರು.ತಕ್ಷಣದಲ್ಲಿ ಆ ಎಲ್ಲಾ ಮೃತ ಕುಟುಂಬಕ್ಕೆ ಪರಿಹಾರದ ಹಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.