ಸುದ್ದಿಬಿಂದು ಬ್ಯೂರೋ
ಕುಮಟ ;
ಸ್ನೇಹಿತರ ಜೊತೆ ಕಡಲತೀರದ ಕಲ್ಲು ಬಂಡೆಯ ಮೇಲೆ ನಿಂತುಕೊಂಡು ಪೋಟೋ ತೆಗೆದುಕೊಳ್ಳುತ್ತಿದ್ದ ವೇಳೆ ವ್ಯಕ್ತಿ ಓರ್ವ ಬಂಡೆ‌ಮೇಲಿಂದ ಕಾಲು ಜಾರಿ ಸಮುದ್ರದಲ್ಲಿ ಬಿದ್ದು ಬೆಳಗಾವಿ ಮೂಲ್ ವ್ಯಕ್ತಿ ಓರ್ವ ಸಾವನ್ಬಪ್ಪಿರುವ ಘಟನೆ ವನ್ನಳ್ಳಿ ಕಡಲತೀರದಲ್ಲಿ ನಡೆದಿದೆ.

ಘಟನೆಯಲ್ಲಿ ಬೆಳಗಾವಿ ಮೂಲದ ಜೂಬೇದಾರ್ (27) ಮೃತಪಟ್ಟಿರುವ ವ್ಯಕ್ತಿಯಾಗಿದ್ದಾನೆ. ಈತ ತನ್ನ ಮೂವರು ಸ್ನೇಹಿತರ ಜೊತೆ ಇಲ್ಲಿನ ವನ್ನಳ್ಳಿ ಬೀಚ್ ಗೆ ಹೋಗಿದ್ದು, ಈ ವೇಳೆ ನಾಲ್ವರು ಸೇರಿಕೊಂಡು ಕಲ್ಲುಬಂಡೆಯ ಮೇಲೆ ನಿಂತುಕೊಂಡು ಪೊಟೋ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ‌. ಈ ವೇಳೆ ಜೂಬೇದಾರ ಎಂಬಾತ ಕಾಲು ಜಾರಿ ಸಮುದ್ರಲ್ಲಿ ಬಿದ್ದಿದ್ದಾನೆ.ಮೃತ ಜೂಬೇದಾರ್ ಹಾಗೂ ಇನ್ನೂಳಿದ ಮೂವರು ಬೆಳಗಾವಿಯಿಂದ‌ ಕುಮಟಕ್ಕೆ ವೆಲ್ಡಿಂಗ್ ಕೆಲಸಕ್ಕೆ ಬಂದಿದ್ದರು ಎನ್ನಲಾಗಿದೆ.

ಆತ ಬಿದ್ದಿರುವುದುದನ್ನ ತಿಳಿದ್ದ ವನ್ನಳ್ಳಿಯ ಐವರು ಯುವಕರು ತಮ್ಮ ಜೀವದ ಹಂಗನ್ನು ತೋರೆದು ಸಮುದ್ರದಲ್ಲಿ ಮುಳುಗಡೆಯಾಗಿದ್ದವನ ರಕ್ಷಣೆಗಾಗಿ ಹರಸಾಹಸ ಪಟ್ಟಿದ್ದಾರೆ. ಆದರೆ ಸಮುದ್ರದಲ್ಲಿ ಅಲೆಯ ಅಬ್ಬರ ಜೋರಾಗಿರುವ ಕಾರಣ ಆತನ ರಕ್ಷಣೆ ಸಾಧ್ಯವಾಗದೆ ಯುವಕ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪಿಎಸ್ಐ ಸಂಪತ್ ಕುಮಾರ ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕ‌ ದಳ ಸಿಬ್ಬಂದಿಗಳು ಸ್ಥಳೀಯರ ಸಹಾಯದಿಂದ ಮೃತ ಯುವಕನ ದೇಹವನ್ನ‌ ಹೊರತೆಗೆಯಲಾಗಿದೆ.ಈ ಬಗ್ಗೆ ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.