ಸುದ್ದಿಬಿಂದು ಬ್ಯೂರೋ
ಕಾರವಾರ : ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನ ತಕ್ಷಣದಿಂದ ಆರಂಭಿಸಿ ಅದಕ್ಕೆ ಬೇಕಾಗಿರುಗ ಸಕಲ ಸೌಲಭ್ಯ ನಾವು ಒದಗಿಸ್ತೆವೆ. ಎಂದು ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳು ವೈದ್ಯ ಅವರು ಮೆಡಿಕಲ್ ಕಾಲೇಜು ಡೈರೆಕ್ಟರ್ ಅವರಿಗೆ ಸೂಚಿಸಿದ್ದಾರೆ..
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೆಡಿಕಲ್ ಕಾಲೇಜು ಡೈರೆಕ್ಟರ್ ಹಾಗೂ ಸರ್ಜನ್ ಅವರುಗಳ ಜೊತೆ ಚರ್ಚೆ ನಡೆಸಿದ ಸಚಿವರು ಕಾರವಾರದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಯಾವೆಲ್ಲಾ ಕುಂದುಕೊರತೆಗಳಿದೆ. ಒಂದು ವೇಳೆ ಸರಕಾರದಿಂದ ಅವೇಲ್ಲವನ್ನ ಪೊರೈಸಿದ್ದರೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಸಾಧ್ಯತೆ ಇದೆಯೇ ಎಂದು ಪ್ರಶ್ನಿಸಿದಾಗ. ಇದಕ್ಕೆ ಡೈರೆಕ್ಟರ್ ಗಜಾನನ ನಾಯಕ ಹಾಗೂ ಸರ್ಜನ್ ಶಿವಾನಂದ ಕುಡ್ತಾಲಕರ್ ಆಸ್ಪತ್ರೆಯಲ್ಲಿ ಇರುವ ವೈದರು ಹಾಗೂ ಶುಶ್ರೂಷಕಿಯರ ಕೊರತೆ ಇರುವ ಕುರಿತು ಸಚಿವರ ಗಮನಕ್ಕೆ ತಂದಿದ್ದಾರೆ.
ಇನ್ನೂ ಈಗಾಗಲೇ ಆಸ್ಪತ್ರೆಯಲ್ಲಿ ಇರುವ ಸಿಬ್ಬಂದಿಗಳಲ್ಲಿ ಎಷ್ಟು ಸಿಬ್ಬಂದಿಗಳು ಹೊರಗುತ್ತಿಗೆಯವರಿದ್ದಾರೆ ಎನ್ನುವ ಬಗ್ಗೆ ಸಹ ಸಚಿವರು ಪ್ರಶ್ನಿಸಿದ್ದು, ಸರಕಾರಿ ಸಿಬ್ಬಂದಿಗಳಿಂತ ಹೆಚ್ಚಿನ ಪಾಲು ಗುತ್ತಿಗೆ ಆಧಾರದಲ್ಲೆ ಹೆಚ್ಚಿನ ಸಿಬ್ಬಂದಿಗಳು ಇರುವ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದು, ಅವರ ವೇತನ ಹಾಗೂ ಪಿಎಫ್ ಇಎಸ್ಐ ನೀಡದೆ ಇರುವ ಬಗ್ಗೆ ಸಹ ಚರ್ಚೆ ನಡೆಸಿದ ಸಚಿವರು, ಹೊರಗುತ್ತಿಗೆ ಸಿಬ್ಬಂದಿಗಳ ವೇತನ ಹೆಚ್ಷಳ ಹಾಗೂ ಇನ್ನಿತರ ಸೌಲಭ್ಯಗಳನ್ನ ತಕ್ಷಣ ನೀಡುವಂತೆ ಸೂಚಿಸಿದ್ದಾರೆ. ಈಗಾಗಲೆ ಆಸ್ಪತ್ರೆಯಲ್ಲಿ ಇರುವ ಸಿಬ್ಬಂದಿಗಳಿಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಅವರಿಂದ ಕೆಲಸವನ್ನ ತೆಗೆದುಕೊಳ್ಳುವ ಮೂಲಕ ಬಡ ರೋಗಿಗಳಿಗೆ ನೆರವಾಗಬೇಕು ಎಂದಿದ್ದಾರೆ.
ನಮ್ಮ ಸರಕಾರದಲ್ಲೆ ಮೆಡಿಕಲ್ ಕಾಲೇಜು ತಂದಿರೋದು
ನಮ್ಮ ಸರಕಾರ ಇರುವಾಗಲೇ ಕಾರವಾರಕ್ಕೆ ಮೆಡಿಕಲ್ ಕಾಲೇಜು ತಂದಿದ್ದೇವೆ, ಆರ್ ವಿ ದೇಶಪಾಂಡೆ ಹಾಗೂ ಉಳಿದ ಎಲ್ಲಾ ಶಾಸಕರು ಸರಕಾರದ ಮೇಲೆ ಸಾಕಷ್ಟು ಒತ್ತಡ ಹಾಕಿ ಮೆಡಿಕಲ್ ಕಾಲೇಜು ತಂದಿದ್ದೇವೆ. ಈಗ ಸಹ ಆಸ್ಪತ್ರೆಯನ್ನ ಇನ್ನಷ್ಟು ಅಭಿವೃದ್ಧಿ ಮಾಡಬೇಕಿದೆ.ನಮ್ಮಗೆ ಜನರ ಆರೋಗ್ಯ ಮುಖ್ಯ, ಅದಕ್ಕಾಗಿ ಆಸ್ಪತ್ರೆಯಲ್ಲಿ ಯಾವೇಲ್ಲಾ ಕೊರತೆಗಳು ಇದೆ ಎನ್ನುವುದನ್ನ ನಮ್ಮ ಗಮನಕ್ಕೆ ತನ್ನಿ, ಸುಮ್ಮನಿದ್ದರೆ ಯಾವುದು ಆಗಲ್ಲ. ಎಲ್ಲವೂ ಸರಕಾದ್ದೆ ಗೈಡಲೈನ್ಸ್ ಅಂತಾ ಇದ್ದರೆ ಆಗಲ್ಲ. ಕೆಲವೊಮ್ನೆ ಅದನ್ನ ಬದಲಾವಣೆ ಮಾಡಬೇಕಾಗುತ್ತದೆ. ಎಲ್ಲವೂ ಗೈಡಲೈನ್ಸ್ ಎಂದು ಕುಳಿತಕೊಂಡರೆ ಏನು ಮಾಡೋದಕ್ಕೆ ಸಾಧ್ಯವಿಲ್ಲ ಎಂದು ಸಚಿವ ಮಂಕಾಳು ವೈದ್ಯ ಅವರು ಹೇಳಿದ್ದರು..