ಸುದ್ದಿಬಿಂದು ಬ್ಯೂರೋ
ಕಲಘಟಗಿ : ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ಟಿಪ್ಪರವೊಂದು ಕಾರವಾರ ಮೂಲದ ಕಾರ್ ಗೆ ಹೊಡೆದ ಪರಿಣಾಮ ಇಬ್ಬರೂ ಗಾಯಗೊಂಡ ಘಟನೆ ಕಿರವತ್ತಿ ಯಲ್ಲಾಪುರ ರಸ್ತೆಯಲ್ಲಿ ನಡೆದಿದೆ.

ಟಿಪ್ಪರ್ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರ್‌ ನಾಲ್ಕೈದು ಪಲ್ಟಿಯಾಗಿ ಹೆದ್ದಾರಿ ಪಕ್ಕದಲ್ಲಿ ಬಿದ್ದಿದೆ.ಇನ್ನೂ ಅಪಘಾತದಿಂದಾಗಿ ಕಾರ ನಲ್ಲಿ ಇದ್ದ ಇಬ್ಬರೂ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

KA-30,8702 ಕಾರವಾರ ನೊಂದಣಿ ಹೊಂದಿರುವ ಕೆಪ್ಪು ಬಣ್ಣದ ಕಾರ ಇದಾಗಿದ್ದು, ಅಪಘಾತದಲ್ಲಿ ಗಾಯಗೊಂಡವರ ಹೆಸರು ಇನ್ನಷ್ಟೆ ತಿಳಿದು ಬರಬೇಕಿದೆ..