ಸುದ್ದಿಬಿಂದು ಬ್ಯೂರೋ
ಶಿರಸಿ :
ನಾಳೆ (ಮಂಗಳವಾರ) ನಗರದ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ಮೂರನೇ ಬಾರಿ ನಡೆಯಬೇಕಿದ್ದ ಜಿಲ್ಲಾ ಮಟ್ಟದ ಕಾಂಗ್ರೆಸ್ ಸಭೆ ರದ್ದಾಗಿದೆ.
ಉತ್ತರ ಕನ್ಮಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಈಗಾಗಲೇ ಕುಮಟಾ ಕ್ಷೇತ್ರವನ್ನ ಹೊರತು ಪಡಿಸಿ ಉಳಿದ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದ್ದು, ಕುಮಟಾ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ಅನ್ನೊದನ್ನ ಘೋಷಣೆ ಮಾಡಿಲ್ಲ.

ಇದೆ ವಿಚಾರಕ್ಕೆ ಸಂಬಂದಿಸಿ ಕುಮಟಾ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಅವರ ಅಭಿಮಾನಿಗಳು ಇಂದು(ಸೋಮವಾರ) ಶಾರದಾ ಶೆಟ್ಟಿ ಅವರನ್ನ ಭೇಟಿ ಮಾಡಿದ್ದು, ಬಳಿಕ ಸಭೆಯನ್ನ ಸಹ ನಡೆಸಿ ಮಾಜಿ ಶಾಸಕಿ ಆಗಿರುವ ಶಾರದಾ ಶೆಟ್ಟಿ ಅವರಿಗೆ ಪಕ್ಷದ ಹೈಕಮಾಂಡ ಟಿಕೆಟ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೂ ನಾಳೆ(ಮಂಗಳವಾರ) ಶಿರಸಿಯಲ್ಲಿ ಸಭೆ ನಡೆಸಲು ಜಿಲ್ಲಾ ಕಾಂಗ್ರೆಸ್ ಕಮಿಂಟಿ ತೀರ್ಮಾಸಿ ಜಿಲ್ಲಾ ಕಾಂಗ್ರೆಸ್ ನ್ ಪ್ರಮುಖರು ಸಭೆಗೆ ಹಾಜರಾಗುವಂತೆ ಎಲ್ಲಾ ಪ್ರಮುಖ ನಾಯಕರಿಗೆ ಹಾಗೂ ಪ್ರಮುಖರಿಗೆ ಮತ್ತು ಪಕ್ಷಕ್ಕೆ ಸಂಬಂಧಿಸಿದ ವಾಟ್ಸಾಪ್ ಗ್ರೂಪ್ ನಲ್ಲಿ ಮೆಸೇಜ್ ಕೂಡ ಮಾಡಲಾಗಿತ್ತು.

ಆದ್ರೆ ಕುಮಟಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗದೆ ಇರುವ ಬಗ್ಗೆ ‌ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರ ಮನೆಯಲ್ಲಿಂದು ಅವರ ಅಭಿಮಾನಿಗಳು ಸಭೆಯನ್ನ ನಡೆಸಿ ಶಾರದಾ ಶೆಟ್ಟಿ ಅವರಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದು ಸಭೆ ಮೂಲಕ ಆಗ್ರಹಿಸಿದ್ದರು.ಇದರಿಂದಾಗಿ ಎಚ್ಚೆತ್ತುಕೊಂಡ ಜಿಲ್ಲಾ ಕಾಂಗ್ರೆಸ್ ನಾಯಕರು ಒಂದು ವೇಳೆ ಶಿರಸಿಯಲ್ಲಿ ಸಭೆ ನಡೆಸಿದರೆ. ಕುಮಟಾದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಶಿರಸಿಯಲ್ಲಿ ನಡೆಯುವ ಸಭೆಗೆ ಆಗಮಿಸಿ ವಿರೋಧ ವ್ಯಕ್ತಪಡಿಸ ಬಹುದು ಇದರಿಂದಾಗಿ ಪಕ್ಷಕ್ಕೆ ಮುಜುಗರ ಉಂಟಾಗಬಹುದು ಎನ್ನುವ ಕಾರಣಕ್ಕೆ ಈ ಸಭೆಯನ್ನೆ ಸಂಪೂರ್ಣವಾಗಿ ರದ್ದು ಮಾಡಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಕೂಡ ಎರಡು ಬಾರಿ ಸಭೆಯನ್ನ ನಡೆಸಲು ತೀರ್ಮಾನಿಸಿದ್ದು ದಿನಾಂಕ ಕೂಡ ನಿಗದಿ ಮಾಡಿದ್ದರು. ಆಗಲ್ಲೂ ಸಹ ವಿರೋಧ ವ್ಯಕ್ತವಾಗಿರುವ ಕಾರಣ ಸಭೆಯನ್ನ ರದ್ದು ಮಾಡಲಾಗಿತ್ತು. ಶಿರಸಿಯಲ್ಲಿ ನಡೆಯುವ ಸಭೆಯನ್ನ ರದ್ದು ಮಾಡಿ ಜಿಲ್ಲಾ‌ ಕಾಂಗ್ರೆಸ್ ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡಿರ ಬಹುದು ಆದರೆ ಶೀಘ್ರದಲ್ಲಿ ಕುಮಟಾ ಕ್ಷೇತ್ರದಲ್ಲಿ ಶಾರದಾ ಶೆಟ್ಟಿ ಅಥವಾ ಕ್ಷೇತ್ರದಲ್ಲಿನ ಟಿಕೆಟ್ ಆಕಾಂಕ್ಷಿ ಹೆಸರನ್ನ ಘೋಷಣೆ ಮಾಡದೆ.

ಒಂದು ವೇಳೆ ಹೊರಗಿನಿಂದ ಬಂದವರಿಗೆ ಏನಾದ್ರೂ ಪಕ್ಷದ ಹೈಕಮಾಂಡ ಟಿಕೆಟ್ ನೀಡಲು ಮುಂದಾಗಿದ್ದೆ ಹೌದಾಗಿದ್ದರೆ. ಜಿಲ್ಲೆಯ ಹಿರಿಯ ಹಾಗೂ ಪ್ರಭಾವಿ ಕಾಂಗ್ರೆಸ್ ನಾಯಕನ ಮನೆಗೆ ಮುತ್ತಿಗೆ ಹಾಕೋದಕ್ಕೆ ಕುಮಟಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಇದನ್ನ ಕಾಂಗ್ರೆಸ್ ಹೈಕಮಾಂಡ ಯಾವ ರೀತಿಯಲ್ಲಿ ಸ್ವೀಕಾರ ಮಾಡಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.