ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ತಂದೆ ಎದುರೆ ಮಗ ಭಿಕ್ಷೆ ಬೇಡುವುದನ್ನ ನೋಡಿದ್ದರೆ ಯಾವ ತಂದೆ-ತಾಯಿಗೆ ಬೇಸರವಾಗಲ್ಲ. ಹೇಳಿ, ಇಂದಿನ ಜೀವನದಲ್ಲಿ ಎಷ್ಟೆ ಬಡತನ ಇದ್ದರೂ ದುಡಿದು ಗೌವರಯುತ್ತವಾಗಿ ಜೀವನ ನಡೆಸುತ್ತಾರೆ. ಹಾಗಂತ ಇಲ್ಲಿ ಮಗ ಭಿಕ್ಷೆ ಬೇಡಿದ್ದು ಯಾಕೆ ಗೊತ್ತಾ..?
ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ನಡೆದ “ಗುರಿ ಸಾಧಿಸಿದ ಮಗಳಿಗೆ ಗೋರಿ ಕಟ್ಟಿದ ಅಳಿಯ” ಎಂಬ ನಾಟಕದಲ್ಲಿ ಕಲಾವಿಧನೋರ್ವ ತನ್ನ ನಾಟಕದ ದೃಶ್ಯವೊಂದರಲ್ಲಿ ತನ್ನ ಪಾತ್ರಕ್ಕೆ ಜೀವ ತುಂಬಿದ ಕ್ಷಣವದು.ಈ ನಾಟಕದಲ್ಲಿ ತೀರಾ ಬಡದಲ್ಲಿದ್ದ ಸನ್ನಿವೇಶವೊಂದರಲ್ಲಿ ಆತ ಜೀವನಕ್ಕಾಗಿ ಭಿಕ್ಷೆ ಬೇಡುವ ಸನ್ನಿವೇಶವೊಂದು ಎದುರಾಗಿತ್ತದೆ.
ಆ ದೃಶ್ಯದಲ್ಲಿ ಆತ ಅಷ್ಟೆ ಸುಂದರವಾಗಿ ಅಭಿನಯಿಸುವ ಮೂಲಕ ಎದುರಿಗಿದ್ದ ಪ್ರೇಕ್ಷರ ಕಣ್ಣಲ್ಲಿ ನೀರು ಬರುವಂತೆ ಮಾಡಿ ಪಾತ್ರಕ್ಕೆ ಜೀವ ತುಂಬಿದ್ದಾನೆ. ರಂಗಭೂಮಿಯಲ್ಲಿ ಮಗ ನಾಟಕದ ಸನ್ನಿವೇಶದಲ್ಲಿ ಭಿಕ್ಷೆ ಬೇಡುತ್ತಿರುವ ದೃಶ್ಯವನ್ನ ಕಂಡು ಕಣ್ಣೀರಿಟ್ಟ ತಂದೆ ನೇರವಾಗಿ ವೇದಿಕೆಗೆ ತೆರಳಿ ಭಿಕ್ಷುಕನ ಪಾತ್ರ ಮಾಡಿದ ತನ್ನ ಮಗನಿಗೆ ತಬ್ಬಿಕೊಂಡು ಭಾವುಕರಾಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ