ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಹೂವಿನ ಕರೆ ಹೂಳೆತ್ತುವ ಮೂಲಕ ಅಭಿವೃದ್ಧಿ ಪಡಿಸಬೇಕೆಂದು ಸ್ಥಳೀಯರು ಗ್ರಾಮ ಪಂಚಾಯತಕ್ಕೆ ಮೂಲಕ ಒತ್ತಾಯಿಸಿದ್ದಾರೆ.
ಈ ಕೆರೆಯು ಅನಾದಿಕಾಲದಿಂದ ಇದ್ದ ಕರೆಯಾಗಿದ್ದು, ಕಳೆದ ಕೆಲ ವರ್ಷಗಳ ಹಿಂದೆ ಸರಕಾರದ ಅನುದಾನದಲ್ಲೇ ದುರಸ್ಥಿ ಮಾಡಲಾಗಿದೆ. ಆದರೆ ಸದ್ಯ ಕೆರೆಯಲ್ಲಿ ಭಾರೀ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಸಾರ್ವಜನಿಕರ ಬಳಕೆಗೆ ಸಿಗುತ್ತಿಲ್ಲ. ಮಹಾಲಿಂಗೇಶ್ವರ ದೇವಸ್ಥಾನ ಪಕ್ಕದಲ್ಲಿರುವ ಈ ಕೆರೆ ಹೂವಿನ ಕೆರೆ ಎಂದು ಪ್ರಸಿದ್ದಿಯಾಗಿದೆ. ಈ ಕೆರೆಯಲ್ಲಿ ಪ್ರತಿ ವರ್ಷ ಗಣಪತಿವಿಸರ್ಜನೆ, ದೇವಸ್ಥಾನದ ಧಾರ್ಮಿಕ ಕಾರ್ಯಗಳಲ್ಲಿ ಭಕ್ತಾದಿಗಳ ಸ್ನಾನಕ್ಕೆ ಮತ್ತು ಊರಿನ ಜನರಿಗೆ ಮಳೆಗಾಲದ ಸಮಯದಲ್ಲಿ ಈಜಾಡಲು ಅನುಕೂಲಕರವಾಗುತ್ತಿತ್ತು.
ಆದರೆ ಇದೀಗ ಕಳೆದ ಕೆಲ ವರ್ಷಗಳಿಂದ ಕೆರೆಯಲ್ಲಿ ಭಾರೀ ಹೂಳು ತುಂಬಿಕೊಂಡಿದ್ದು, ಇನ್ನೊಂದು ಕರೆ ಈ ಹಿಂದೆ ಕೆರೆಯ ಸುತ್ತಲು ನಿರ್ಮಿಸಲಾಗಿದ್ದ ಕರೆಕಟ್ಟೆಗಳು ಶಿಥಿಲಗೊಂಡಿದೆ. ಈ ಬಗ್ಗೆ ಸ್ಥಳೀಯ ಯುವಕರು ಅನೇಕ ಬಾರಿ ಪಂಚಾಯತಗೆ ಮನವರಿಕೆ ಮಾಡಿಕೊಳ್ಳುತ್ತಲೆ ಬರುತ್ತಿದ್ದಾರೆ. ಆದರೂ ಕೆರೆ ಹೂಳೆತ್ತಲು ಸಾಧ್ಯವಾಗಿಲ್ಲ.ಹೀಗಾಗಿ ಮಳೆಗಾಲ ಆರಂಭವಾಗುವುದರೊಳಗೆ ಕೆರೆ ಹೂಳೆತ್ತುವ ಮೂಲಕ ಈ ಹಿಂದಿನಂತೆ ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಕೆರೆ ಅಭಿವೃದ್ಧಿ ಪಡಿಸಬೇಕೆಂದು ಸ್ಥಳೀಯರು ಈ ಮೂಲಕ ಒತ್ತಾಯಿಸಿದ್ದಾರೆ.
ಇದನ್ನೂ ಓದಿ