ಸುದ್ದಿಬಿಂದು ಬ್ಯೂರೋ
ಬೆಂಗಳೂರು :ಕಳೆದ ಎರಡು ವರ್ಷಗಳ ಹಿಂದೆ ದೇಶದ ಜನರನ್ನ ತಲ್ಲಣಗೊಳಿಸಿ ಹೋಗಿದ್ದ ಕರೋನಾ ಇದೀಗ ಮತ್ತೆ ಜನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಕೇರಳದಲ್ಲಿ ಕರೋನಾ ರೂಪಾಂತರಿ ಜೆಎನ್​.1 ಪತ್ತೆಯಾಗಿದ್ದು,ದೇಶದಾದ್ಯಂತ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.ಇದು ಕರ್ನಾಟಕದಲ್ಲಿಯೂ ಕಳವಳಕ್ಕೆ ಕಾರಣವಾಗಿದೆ.ಈ ಕುರಿತಾಗಿ ರಾಜ್ಯದಲ್ಲಿ ಕಟ್ಟೆಚ್ವರವಹಿಸುವಂತೆ ಈಗಾಗಲೇ ಸಿ ಎಂ ಆರೋಗ್ಯ ಇಲಾಖೆಗೆ ಸೂಚನೆ ಕೂಡ ನೀಡಿದ್ದಾರೆ.

ಈ ಸಂಬಂಧವಾಗಿ ನಾಳೆ ತಾಂತ್ರಿಕ ಸಲಹಾ ಸಮಿತಿ ಸಭೆ ನಾಳೆಯ ಸಭೆಯಲ್ಲಿ ಒಂದಿಷ್ಟು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ‌.ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯದ ಜೊತೆಗೆ ಇನ್ನೂ ಹಲವು ತೀರ್ಮಾನ ತೆಗೆದುಕೊಳ್ಳಬಹುದಾಗಿದೆ. ರಾಜ್ಯದ ಎಲ್ಲಾ ಆಸ್ಪತ್ರೆಯಲ್ಲಿ ಕರೋನಾ ಸಂಭಂಧಿಸಿ ಸಿದ್ದತೆ‌ ಮಾಡಿಕೊಳ್ಳುವಂತೆ ಸೂಚನೆ ಕೂಡ ನೀಡಲಾಗಿದೆ.