suddibindu.in
ಯಲ್ಲಾಪುರ : ಪಟ್ಟಣ ಪಂಚಾಯತ ಪೌರಕಾರ್ಮಿಕ ಲಕ್ಷ್ಮಣ ಆಯಿತ್ರ ಹರಿಜನ ಅವರು ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಹೃದಯಾಪಘಾತದಿಂದ ಮೃತಪಟ್ಟಿದ್ದು, ಸ್ಥಳೀಯ ಶಾಸಕ ಶಿವರಾಮ ಸಂತಾಪ ಸಲ್ಲಿಸಿದ್ದಾರೆ.
ಪಟ್ಟಣದ ಪೌರಕಾರ್ಮಿಕರಾಗಿದ್ದ ಲಕ್ಷ್ಮಣ ಹರಿಜನ ಅವರು ಇಂದು ಬೆಳಿಗ್ಗೆ ಪಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನ ಯಲ್ಲಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುಲಾಗಿತ್ತಾದರೂ ಆಸ್ಪತ್ರೆ ತಲುಪುವುದರೊಳಗೆ ಅವರು ಮೃತಪಟ್ಟಿದ್ದಾರೆ. ಪೌರ ಕಾರ್ಮಿಕ ಲಕ್ಣ್ಮಣ ನಾಯ್ಕ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಯಲ್ಲಾಪುರ ಶಾಸಕರಾದ ಶಿವರಾಮ ಹೆಬ್ಬಾರ್ ಅವರು ತಮ್ಮ ಕಾರ್ಯಕ್ರಮವನ್ನ ಮೊಟಕುಗೊಳಿಸಿ ತಕ್ಷಣ ಸರಕಾರಿ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಇದನ್ನೂ ಓದಿ
- ಸರಕಾರಿ ಆಸ್ಪತ್ರೆ ವೈದ್ಯರು ಸತ್ತಿದ್ದೆಂದು ಘೋಷಿಸಿದ ಮಗು, ಖಾಸಗಿ ಆಸ್ಪತ್ರೆಯಲ್ಲಿ ಜೀವಂತ ಜನನ..!
- ಲಂಚದ ದಂಧೆ : ಕಾರವಾರ ಮೆಡಿಕಲ್ ಆಸ್ಪತ್ರೆ ಅಧೀಕ್ಷಕ ಅಮಾನತ್
- “ರೂಮ್ ಮಾಡ್ತೀನಿ ಬಾ..!” ಚಪ್ಪಲಿಯಿಂದ ಕಾಮುಕನ ಕಿಕ್ ಇಳಿಸಿದ ಮಹಿಳೆ”
ಆಸ್ಪತ್ರೆಗೆ ತೆರಳಿದ ಶಾಸಕ ಶಿವರಾಮ ಹೆಬ್ಬಾರ ಅವರು ಲಕ್ಷ್ಮಣ ಹರಿಜನ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು ಮೃತ ಲಕ್ಣ್ಮಣ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದು, ಸರಕಾರಿಂದ ಸೌಲಭ್ಯ ಒದಗಿಸಿ ಕೊಡುವುದಾಗಿ ಲಕ್ಣ್ಮ ಕುಟುಂಬಸ್ಥರಿಗೆ ಭರವಸೆ ನೀಡಿದ್ದಾರೆ.