ಸುದ್ದಿಬಿಂದು ಬ್ಯೂರೋ
ಕಾರವಾರ :
ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೆ ಸೇರಿರುವ ಮಾಜಿ ಎಂ ಎಲ್ ಎಸ್ ಘೋಟ್ನೆಕರ್ ಜೆಡಿಎಸ್ ಸೇರ್ಪಡೆ ಆದ ಬಳಿಕ ಕ್ಷೇತ್ರದಲ್ಲಿ ಇದ್ದ ಮೂಲಕ ಜೆಡಿಎಸ್ ಕಾರ್ಯಕರ್ತರನ್ನ ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎನ್ನುವ ಆರೋಪ ಜೆಡಿಎಸ್ ಮೂಲ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ.

ಘೋಟ್ನೆಕರ್ ಕಾಂಗ್ರೆಸ್ ನಲ್ಲಿ ಇದ್ದು ಎಲ್ಲಾರೀತಿಯಲ್ಲೂ ಅಧಿಕಾರವನ್ನ ಅನುಭವಿಸಿ. ಕಾಂಗ್ರೆಸ್ ಭದ್ರ ಕೋಟೆಯನ್ನ ಛೀದ್ರ ಮಾಡಿ, ಕಾಂಗ್ರೆಸ್ ನ ಹಿರಿಯ ರಾಜಕಾರಣಿ ಆರ್ ವಿ ದೇಶಪಾಂಡೆ ಅವರನ್ನ ರಾಜಕೀಯವಾಗಿ ಸೋಲಿಸಬೇಕು ಎಂದು ಸಾಕಷ್ಟು ಕಸರತ್ತು,ಮಸಲತ್ತು ನಡೆಸಿದ್ದರು. ಆದ್ರೆ ಇವರ ಯಾವ ಕಸರತ್ತು, ಮಸಲತ್ತು ವರ್ಕೌಟ್ ಆಗದೆ ಇದ್ದಾಗ ಬಿಜೆಪಿ ಸೇರಿ ಟಿಕೆಟ್ ಪಡೆದು ಈ ಬಾರಿ ಸ್ಪರ್ಧೆ ಮಾಡಬೇಕು ಎಂದು ಸಾಕಷ್ಟು ಪ್ರಯತ್ನ ಮಾಡಿದ್ದರು.

ಆದರೆ ಅಲ್ಲಿಯೂ ಇವರನ್ನ ಸೇರಿಸಿಕೊಳ್ಳದೆ ಇರುವ ಕಾರಣಕ್ಕೆ ಬೆರೆಯವರ ರಾಜಕೀಯ ಮುಗಿಸಲು ಹೋಗಿ ಕೊನೆಗೆ ತನ್ನ ರಾಜಕೀಯವೆ ಅಂತ್ಯವಾಗುತ್ತದೆ ಎಂದು ಮನವರಿಕೆ ಮಾಡಿಕೊಂಡು ಗತಿಇಲ್ಲದೆ ಜೆಡಿಎಸ್ ಸೇರಿಕೊಂಡಿದ್ದಾರೆಂದು ಕ್ಷೇತ್ರದ ತುಂಬ ಎಲ್ಲರೂ ಆಡಿಕೊಳ್ಳುತ್ತಿದ್ದಾರೆ. ಜೆಡಿಎಸ್ ಗೆ ಬಂದ ಮೇಲಾದರೂ ಎಲ್ಲರನ್ನ ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆ ಮಾಡಬಹುದು ಅಂದುಕೊಂಡಿದ್ದ ಜೆಡಿಎಸ್ ಮೂಲ ಕಾರ್ಯಕರ್ತರಿಗೆ ಇದೀಗ ನಿರಾಶೆ ಉಂಟಾಗಿದೆ.

ಘೋಟ್ನೆಕರ್ ಹಾಗೂ ಅವರ ಪುತ್ರ ಇಬ್ಬರೂ ಸೇರಿಕೊಂಡು ನಾವೆ ಜೆಡಿಎಸ್ ನ ಪಿತಾಮಹ ಎನ್ನುವಂತೆ ಕ್ಷೇತ್ರದಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ನ ಮೂಲ ಹಲವು ಮೂಲ ಕಾರ್ಯಕರ್ತರು ಘೋಟ್ನೆಕರ್ ನಡೆಯ ಬಗ್ಗೆ ಅಸಮಧಾನ ತೊಡಿಕೊಂಡಿದ್ದಾರೆ. ಇವರು ಇನ್ನೂ ಶಾಸಕರೆ ಆಗಿಲ್ಲ‌. ಈಗಲ್ಲೆ ತಾನೆ ಶಾಸಕ ಎನ್ನುವ ರೀತಿಯಲ್ಲಿ ಘೋಟ್ನೆಕರ್ ಹಾಗೂ ಅವರ ಮಗ ವರ್ತಿಸುತ್ತಿದ್ದಾರೆ‌. ಇದರಿಂದಾಗಿ ನಮ್ಮೆಲ್ಲಾ ಬೇಸರವಾಗಿದೆ. ಇವರ ನಡೆಯ ಬಗ್ಗೆ ಕುಮಾರಣ್ಣ ಅವರ ಗಮನಕ್ಕೂ ತರುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ಸೇರಲು ಹಲವರು ತಯಾರಿ

ಘೋಟ್ನೆಕರ್ ಜೆಡಿಎಸ್ ಗೆ ಬಂದ ಬಳಿಕ ಸಾಕಷ್ಟು ಅಸಮಧಾನಕ್ಕೆ ಒಳಗಾಗಿರುವ ಮೂಲ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಸೇರಲು ತಯಾರಿ ನಡೆಸಿಕೊಂಡಿದ್ದು, ಈ ವಿಚಾರವಾಗಿ ಈಗಾಗಲೆ ಕಾಂಗ್ರೆಸ್ ನ ಹಿರಿಯ ನಾಯಕ ಆರ್ ವಿ ದೇಶಪಾಂಡೆ ಅವರ ಜೊತೆ ಈಗಾಗಲೆ ಒಂದೆರಡು ಸುತ್ತಿನ ಮಾತು ಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಅತೀ ಶೀಘ್ರದಲ್ಲಿ ಅವರೆಲ್ಲರೂ ಕಾಂಗ್ರೆಸ್ ತೆಕ್ಕೆಗೆ ಸೇರುವುದು ಬಹುತೇಕ ಖಚಿತವಾಗಿದೆ‌‌.