ಸುದ್ದಿಬಿಂದು ಬ್ಯೂರೋ
ಚಿಕ್ಕಮಗಳೂರು
: ದೆಹಲಿ ರಾಜಕೀಯಕ್ಕಿಂತ (Delhi Politics) ಹಳ್ಳಿ ರಾಜಕೀಯ ತುಂಬಾ ಕಷ್ಟ. ಪಕ್ಷದ ಚಿಹ್ನೆ ಯಲ್ಲಿ ಚುನಾವಣೆ ಆದ್ರೆ ಎಂಪಿ-ಎಂಎಲ್‍ಎ ಬೇಕಾದ್ರು ಆಗಬಹುದು.ಆದ್ರೆ ಹಳ್ಳಿ ರಾಜಕೀಯದಲ್ಲಿ ಗ್ರಾಮ ಪಂಚಾಯಿತಿ (Gram Panchayat Election) ಸದಸ್ಯ ಆಗೋದು ಕಷ್ಟ. ಅದರಲ್ಲೂ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರಾಗೋದು ಸುಲಭದ ಮಾತಲ್ಲ. ಇವೆಲ್ಲದರ ನಡುವೆ ಒಂದೆ ಗ್ರಾಮ ಪಂಚಾಯತದಲ್ಲಿ ತಾಯಿ-ಮಗಳು ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದು ಇದಕ್ಕೆ ಕಾಫಿನಾಡು ಚಿಕ್ಕಮಗಳೂರು (Chikkamagaluru) ಸಾಕ್ಷಿಯಾಗಿದೆ.

ಗರ್ಜೆ ಗ್ರಾಮದ ತಾಯಿ,ಮಗಳು ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿರುವ ಸ್ವಾರಸ್ಯಕರ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗರ್ಜೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಎರಡನೇ ಅವಧಿಗೆ ನಡೆದ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲಾಗಿತ್ತು.ಈ ಹಿಂದೆ ಗೆಲುವು ಸಾಧಿಸಿದ್ದ ಪಂಚಾಯಿತಿಯ ಒಟ್ಟು 7 ಸದಸ್ಯರಲ್ಲಿ ಆರಂಭದಿಂದಲೂ ಎರಡು ಗುಂಪುಗಳಿದ್ದು, ತಾಯಿ ಜಿ.ಎನ್. ನೇತ್ರಾವತಿ ಮತ್ತು ಮಗಳು ಜಿ.ಕೆ. ಸ್ನೇಹ ಬೆಂಬಲದಿಂದ, ನಾಲ್ಕು ಜನ ಸದಸ್ಯರ ಒಂದು ಗುಂಪಿನ ಎನ್.ಆರ್. ರಂಜಿತಾ ಮತ್ತು ಎಂ.ಎಲ್. ಹರೀಶ್ ಮೊದಲ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರು.

ಈಗ ಎರಡನೇ ಅವಧಿಗೆ ತಾಯಿ ನೇತ್ರಾವತಿ ಉಪಾಧ್ಯಕ್ಷೆಯಾಗಿದ್ದು ದೊಡ್ಡ ವಿಚಾರವಿಲ್ಲ. ಆದ್ರೆ, 20ವರ್ಷದ ಮಗಳು ಅಧ್ಯಕ್ಷೆಯಾಗಿದ್ದು ತುಂಬಾ ವಿಶೇಷ,. ಪದವಿ ಓದಿರೋ ಆಕೆ ಎಲೆಕ್ಷನ್ ನಿಲ್ಲೋಕೆ ಮನಸ್ಸಿರಲಿಲ್ಲವಂತೆ. ಜಿ.ಮಾದಾಪುರ ಹಾಗೂ ಗರ್ಜೆ ಎರಡೂ ಗ್ರಾಮದಲ್ಲೂ ನೇತ್ರಾವತಿಯನ್ನ ನಿಲ್ಲಿಸೋಕೆ ಅವರ ಬಂಬೆಲಿಗರು ತೀರ್ಮಾನಿಸಿದ್ದರಂತೆ. ಎರಡೂ ಕಡೆ ಆಯ್ಕೆಗೊಂಡರೆ ಒಂದು ವಾರ್ಡನಲ್ಲಿ ರಾಜೀನಾಮೆ ನೀಡಬೇಕು, ವಾರ್ಡ್ ನಲ್ಲಿ ಮತ್ತೆ ಉಪಚುನಾವಣೆ ನಡೆಸಬೇಕಾಗತ್ತೆ, ಎಂದು ನಾಮಪತ್ರ ಸಲ್ಲಿಕೆಯ ಕೊನೆ ದಿನದ ಐದು ನಿಮಿಷ ಇರುವಾಗ ಒಂದು ವಾರ್ಡ್ ಸ್ಪರ್ಧೆಯಿಂದ ಹಿಂದೆ ಸರಿದು ಒಂದೇ ವಾರ್ಡ್ ನಿಂದ ಸ್ಪರ್ಧಿಸಿ ಗೆದ್ದು ಸದಸ್ಯರಾಗಿದ್ದರು.

ಆಗ ಅಮ್ಮ-ಮಗಳು ಇಬ್ಬರು ಗೆದ್ದೇಬಿಟ್ರು. ಗೆದ್ದಿದ್ದೇ ಪುಣ್ಯ ಎಂದುಕೊಂಡಿದ್ದ ಅಮ್ಮ-ಮಗಳು ಇಂದು ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿ ಆಯ್ಕೆಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.