ಸುದ್ದಿಬಿಂದು‌ ಬ್ಯೂರೋ
ಮೈಸೂರು
: ಲಕ್ಷ.ಲಕ್ಷ.. ಸೂಫಾರಿ ಪಡೆದು ಕೊಲೆ‌‌‌ ಮಾಡಿರೋದನ್ನ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಕೇವಲ 485 ರೂಪಾಯಿಗೆ ಡಬಲ್ ಮರ್ಡರ್ ಮಾಡಿರುವ ಪ್ರಕರಣವನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಣಸೂರಿನಲ್ಲಿ ಡಬಲ್ ಮರ್ಡರ್ ಮಾಡಿದ ಆರೋಪಿ ಅಭಿಷೇಕ (26) ಅಲಿಯಾಸ್ ಅಭಿ ಎಂದು ಗುರುತಿಸಲಾಗಿದ್ದು, ಆರೋಪಿಯು ಷಣ್ಮುಖ‌(65), ವೆಂಕಟೇಶ್ (75), ಎಂಬುವವರನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ,
ಹುಣಸೂರಿನ ಮಿಸ್ಬಾ ಸಾಮಿಲ್‌ನಲ್ಲಿ ಕೊಲೆ ಮಾಡಿ ವೆಂಕಟೇಶ್ ಬಳಿ ಇದ್ದ 485 ರೂಪಾಯಿ ತೆಗೆದುಕೊಂಡು ಅಭಿ ಪರಾರಿಯಾಗಿದ್ದ. ರಾಡಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದ ಆರೋಪಿ ಅಭಿಯ ಚಲನವಲನಗಳು ಸಾಮಿಲ್ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಕಾರ್ಯಾಚರಣೆ ವೇಳೆಯಲ್ಲಿ ಶ್ವಾನ ಸಹ ಸಾಮಿಲ್‌ನಲ್ಲಿ ಸುತ್ತಾಡಿ ಅಭಿ ಮನೆ ಬಳಿ ನಿಂತಿತ್ತು. ಈ ಹಿಂದೆ ಹಲವು ಕಳ್ಳತನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಭಿ, ದಿನ ನಿತ್ಯ ಗಾಂಜಾ, ಸೆಲ್ಯೂಷನ್ ಸೇದಿ ಜನರಿಗೆ ಕಿರುಕುಳ ನೀಡುತ್ತಿದ್ದನಲ್ಲದೇ, ಜಾತ್ರೆ, ಬಸ್ ನಿಲ್ದಾಣ ಸೇರಿದಂತೆ ರಾಜಕೀಯ ಸಮಾವೇಶಗಳಲ್ಲಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.