suddibindu.in
ಕೇರಳ: ವಯನಾಡ್ ದುರಂತದಲ್ಲಿ ಊರಿಗೆ ಊರೇ ಆ ದುರಂತದಲ್ಲಿ ಸಿಲುಕಿ ಮಣ್ಣು ಪಾಲಾದರೂ ಆ ಅಜ್ಜಿ ಮೊಮ್ಮಗಳು ಬದುಕಿದ್ದು ಮಾತ್ರ ರೋಚಕವಾಗಿದೆ.

ಸಂಕಷ್ಟದಲ್ಲಿದ್ದ ಆ ಕರಾಳ ರಾತ್ರಿ ಬೆಟ್ಟದಲ್ಲಿ ಕಾಡಾನೆಯೊಂದು ಕಾವಲಾಗಿ ನಿಂತಿತ್ತು.ಸಾವಿನ ದವಡೆಯಿಂದ ಪಾರಾಗಿ ಬಂದ ವೃದ್ಧೆ ಸುಜಾತ ಸ್ಥಳಿಯೊರಬ್ಬರಿಗೆ ನೀಡಿರುವ ಆಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗತ್ತಿದೆ. ರಾತ್ರಿ ಭಾರೀ ಮಳೆ ಆಗುತ್ತಿರುವುದರಿಂದ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಆ ಅಜ್ಜಿಗೆ ಎಚ್ಚರವಾಯತ್ತು ಎನ್ನಲಾಗಿದೆ. ಆ ವೇಳೆ ದೊಡ್ಡ ಶಬ್ಬವೊಂದು ಕೇಳಿಸಿದ ಬೆನ್ನಲ್ಲೆ ಆ ಅಜ್ಜಿಯ ಮನೆಗೆ ನೀರು ನುಗ್ಗಿ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿತ್ತು, ನನ್ನ ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ ಗುಡ್ಡ ಜರಿದು ಮನೆಗೆ ಉರುಳಿ ಬಿದ್ದಾಗ ಮನೆಯ ಚಿಮಣಿಯಲ್ಲಿ ಸ್ವಲ್ಪ ಜಾಗ ಕಾಣಿಸಿತ್ತು.ಇಟ್ಟಿಗೆಯನ್ನ ಸರಿಸಿ ಜಾಗ ಮಾಡಿಕೊಂಡು ನಾನು, ಮಗಳು,ಮೊಮ್ಮಗಳು ಹಾಗೆ ಅಳಿಯ ಎಲ್ಲರೂ ಹೊರ ಬಂದು ಬೆಟ್ಟದ ಬದಿಗೆ ಓಡಿದ್ದಾರಂತೆ.

ಇದನ್ನೂ ಓದಿ

ಹೇಗೋ ಒದ್ದಾಡಿ ಜೀವ ತಪ್ಪಿಸಿಕೊಂಡು ಬೆಟ್ಟದ ಬಳಿ ಬಂದಾಗ ಅಲ್ಲಿ ದೊಡ್ಡ ಕಾಡಾನೆ ನಿಂತಿತ್ತು. ಆಗ ಆನೆ ಬಳಿ ನಿಂತುಕೊಂಡು ಪ್ರಾರ್ಥನೆ ಮಾಡಿಕೊಂಡ್ವಿ ಈಗ ನಾವೇಲ್ಲಾ ದೊಡ್ಡ ದುರಂತದಲ್ಲಿ ತಪ್ಪಿಸಿಕೊಂಡು ಬಂದಿದ್ದೇವೆ ನೀನು ನಮ್ಮಗೇನು ಮಾಡಬೇಡಪ್ಪ ಅಂತಾ ನಾನು ಆನೆ ಬಳಿ ನಿಂತು ಕಣ್ಣೀರು ಹಾಕಿದೆ. ಆಗ ಆನೆಯ ಕಣ್ಣೀನಿಂದಲ್ಲೂ ನೀರು ಬಂತು. ಇನ್ನೂ ರಾತ್ರಿ ಬೆಳಗ್ಗಾಗೂವರೆಗೂ ನಾವು ಆನೆಯ ಕಾಲಿನ ಹತ್ತಿರವೆ ಸಮಯ ಕಳೆದಿದ್ದೇವೆ.

ರಾತ್ರಿ ಪೂರ್ತಿ ಮಳೆ. ಸರಿಯಾಗಿ ನಿಂತುಕೊಳ್ಳಲು ಸಾಧ್ಯವಾಗತ್ತಾ ಇರಲಿಲ್ಲ.ಇನ್ನೂ ಬೆಳಿಗ್ಗೆ ಆರು ಗಂಟೆ ಆದಾಗ ಎಲ್ಲಿದ್ದಲೋ ಜನರು ಬಂದರು.ನಮ್ಮನ್ನ ಕಾಪಾಡಲು ನಮ್ಮೂರಿಂದ ಯಾರು ಕೂಡ ಬದುಕಿರಲಿಲ್ಲ.ದೂರದ ಊರಿನಿಂದ ಬಂದ ಜನರು ನಮ್ಮ ಕಾಪಾಡಿ ಸುರಕ್ಷಿತ ಜಾಗಕ್ಕೆ ತಲುಪಿಸಿದರು ಅಂತಾ ಸುಜಾತ ತಿಳಿಸಿದ್ದಾರೆ‌