ಸುದ್ದಿಬಿಂದು ಬ್ಯೂರೋ
ಕಾರವಾರ: ಲೋಕಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವಾಗಲೆ, ರಾಜ್ಯದ 28 ಕ್ಷೇತ್ರದ ಪೈಕಿ ಎಂಟು ಕ್ಷೇತ್ರದ ಟಿಕೆಟ್ ‌ಪೈನಲ್ ಆಗಿದೆ ಎನ್ನುವ ಬಗ್ಗೆ ಜಿಲ್ಲೆಯ ಬಿಜೆಪಿಯ ಪ್ರಭಾವಿ ನಾಯಕಿಯ ವಾಟ್ಸ್ಯಪ್ ಸ್ಟೇ
ಟಸ್ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಈಗಾಗಲೇ ಉತ್ತರಕನ್ನಡ ಜಿಲ್ಲೆಯ ಹಾಲಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಸಿಗೋದು ಡೌಟ್ ಎನ್ನುತ್ತಿರುವಾಗಲೇ ಜಿಲ್ಲೆಯ ಬಿಜೆಪಿಯ ಪ್ರಭಾವಿ ನಾಯಕಿಯೊಬ್ಬರು ತಮ್ಮ ಮೊಬೈಲ್ ಸ್ಟೇಟ್ಸ್‌ನಲ್ಲಿ ಉತ್ತರಕನ್ನಡ ಜಿಲ್ಲೆಯ ಎಂ ಪಿ ಟಿಕೆಟ್ ಸೇರಿ ಇನ್ನೂ ಎಂಟು ಕ್ಷೇತ್ರದ ಅಭ್ಯರ್ಥಿಗಳು ಯಾರು ಎನ್ನುವ ಬಗ್ಗೆ ಬರೆಯಲಾಗಿದ್ದ ಪೊಟೋ ಒಂದನ್ನ‌ ತಮ್ಮ‌ ಸ್ಟೇಟ್ಸ್‌ಗೆ ಹಾಕಿಕೊಂಡಿದ್ದಾರೆ.

ಬಹುತೇಕವಾಗಿ ಈ ಹೆಸರುಗಳು ಇರುವ ಲಿಸ್ಟ್ ಬಿಜೆಪಿಯ ನಾಯಕರಿಗೆ ವೈಯಕ್ತಿಕವಾಗಿ ಬಂದಿರಬಹುದು ಆದರೆ ಈ ಪ್ರಭಾವಿ ನಾಯಕರು ಯಾರಿಗೊ ಕಳುಹಿಸಲು ಹೋಗಿ ತಮ್ಮ ಮೊಬೈಲ್ ಸ್ಟೇಟ್ಸ್‌ಗೆ ಹಾಕಿಕೊಂಡಿದ್ದಾರೆ. ಅದನ್ನ ಈಗಾಗಲೆ ಸಾಕಷ್ಟು ಜನ ಸಹ ಗಮನಿಸಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆ ಆರಂಭವಾಗಿದೆ.