ಸುದ್ದಿಬಿಂದು ಬ್ಯೂರೋ
ಕಾರವಾರ: ಕಾರವಾರ ಮೀಡಿಯಾ ಕಪ್ 2024 ಕಾರವಾರ ವಾರಿಯರ್ಸ (ಇಲೆಕ್ಟ್ರಾನಿಕ್ ಮೀಡಿಯಾ) ತಂಡ ಗೆದ್ದು ಕೊಂಡಿತು.ಕಾರವಾರ ಕಿಂಗ್ಸ ತಂಡವನ್ನು 28 ರನ್ ಗಳ ಅಂತರದಿಂದ ಸೋಲಿಸಿತು.
ಫೈನಲ್ ಪಂದ್ಯದಲ್ಲಿ ಕಾರವಾರ ವಾರಿಯರ್ಸ 121 ಮೊತ್ತ ಕಲೆಹಾಕಿತ್ತು . ಈ ಮೊತ್ತವನ್ನು ಬೆನ್ನು ಹತ್ತಿದ ಕಾರವಾರ ಕಿಂಗ್ಸ ತಂಡಕ್ಕೆ 93 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಫಲಿತಾಂಶದ ಮೂಲಕ ಕಾರವಾರ ಪ್ರಿಂಟ್ ಮೀಡಿಯಾದ ಕಾರವಾರ ಕಿಂಗ್ಸ ತಂಡ ರನ್ನರ್ ಅಪ್ ಆಯಿತು.
ಸಮಾರೋಪ ಸಮಾರಂಭ :
ಕ್ರೀಡೆ ಅನ್ನುವುದು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಲ್ಲ ಎಂದು ಸೇಂಟ್ ಮಿಲಾಗ್ರಿಸ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಹೇಳಿದರು.
ಕಾರವಾರ ಪತ್ರಿಕಾ ಭವನ ನಿರ್ವಹಣಾ ಸಮಿತಿಯಿಂದ ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಮೀಡಿಯಾ ಕಪ್- 2024 ನಲ್ಲಿ ವಿಜೇತ ತಂಡಕ್ಕೆ 50 ಸಾವಿರ ರೂ. ಬಹುಮಾನ ಹಾಗೂ ಟ್ರೋಫಿ ವಿತರಿಸಿ ಅವರು ಮಾತನಾಡಿದರು.
ಮಾಧ್ಯಮ ಸಂವಿಧಾನದ ನಾಲ್ಕನೆಯ ಅಂಗ.ಅದು ಸರಿಯಾಗಿದ್ದರೆ ಸಮಾಜ ಸುಧಾರಣೆ ಸಾಧ್ಯ ಎಂದರು. ಮಾಧ್ಯಮ ಉತ್ತಮ ದಾರಿಯಲ್ಲಿ ಇದ್ದರೆ, ಉಳಿದ ಮೂರು ಅಂಗ ಸರಿಯಿರುತ್ತವೆ ಎಂದರು.
ಅತಿಥಿಯಾಗಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಗೆ ಉತ್ತಮ ಕ್ರೀಡಾಂಗಣವಾಗಲಿ ಎಂದು ಆಶಿಸಿದರು.ಮತ್ತೋರ್ವ ಅತಿಥಿ ಕ್ರೀಡಾಪಟು ಗಿರೀಶ ನಾಯ್ಕ ಮಾತನಾಡಿದರು. ರತ್ನಾಕರ ನಾಯ್ಕ ಇದ್ದರು.
ಪತ್ರಿಕಾ ಭವನ ನಿರ್ವಹಣೆ ಸಮಿತಿ ಅಧ್ಯಕ್ಷ ಟಿ.ಬಿ.ಹರಿಕಾಂತ,ಪದಾಧಿಕಾರಿಗಳಾದ ಸುಭಾಷ್ ಚಂದ್ರ ಹಿರೇಮಠ, ಗಣೇಶ್ ಹೆಗಡೆ, ಹಿರಿಯ ಪತ್ರಕರ್ತರಾದ ನಾಗರಾಜ್ ಹರಪನಹಳ್ಳಿ, ವಸಂತ ಭಟ್ಟ ಕತಗಾಲ ವೇದಿಕೆಯಲ್ಲಿದ್ದರು . ಸಂದೀಪ್ ಸಾಗರ, ಗಿರೀಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.