Anantakumar lost his composure
suddibindu.in
Karwar: ಕಾರವಾರ: ನಮ್ಮ ಸಂವಿಧಾನ (Constitution)ದಡಿಯಲ್ಲಿ 6 ಬಾರಿ ಲೋಕಾಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (mp Anantakumar)ಬಾಯಿಯೆ ಬಂದ ಹಾಗೆ ಮಾತನಾಡುತ್ತಿದ್ದಾರೆ.ಮಾಧ್ಯಮದವವರಿಗೂ ಬಾಯಿಗೆ ಬಂದ ಹಾಗೆ ಮಾತಮಾಡಿದ್ದಾರೆ.ಅವರ ಈ ಹೇಳಿಕೆಯನ್ನ ತೀವೃವಾಗಿ ಖಂಡಿಸುತ್ತೇನೆಂದು ಕಾಂಗ್ರೆಸ್‌‌‌‌ನ(Congress) ಜಿಲ್ಲಾ ಉಪಾಧ್ಯಕ್ಷ ಆರ್ ಎಚ್ ನಾಯ್ಕ ಖಂಡಿಸಿದ್ದಾರೆ.

ಉತ್ತಮ ಸಂಸ್ಕಾರ ಕೊಡುವ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅನಂತಕುಮಾರ್ ಹೆಗಡೆ ಬಾಯಿಂದ ಇತ್ತೀಚೆಗೆ ಹೊರಡುವ ಸಂಸ್ಕ್ರತಿಹೀನ ಪದಗಳನ್ನು ಕೇಳಿದರೆ ಬಹುಶಃ ಅವರ ತಂದೆ ತಾಯಂದಿರು ಸಹ ನಾಚಿಕೆ ಪಟ್ಟುಕೊಳ್ಳುವ ಸ್ಥಿತಿ ಏರ್ಪಟ್ಟಿದೆ. ಇವರ ಈ ರೀತಿಯ ದುಂಡಾವರ್ತನೆಯನ್ನು ಯಾರೂ ಸಹ ಒಪ್ಪಲಿಕ್ಕೆ ಸಾಧ್ಯವಿಲ್ಲ. ಶಾಸಕಾಂಗ,ನ್ಯಾಯಾಂಗ,ಹಾಗೂ ಕಾರ್ಯಾಂಗಗಳಲ್ಲಿ ನಡೆಯುವ ತಪ್ಪುಒಪ್ಪುಗಳನ್ನು ತಿದ್ದುವ ಪತ್ರಿಕಾರಂಗವನ್ನು ಈ ರೀತಿ ಅವಮಾನಿಸುವುದು ಅಕ್ಷಮ್ಯ ಅಪರಾಧವಾಗಿದೆ.

ಇದನ್ನೂ ಓದಿ:-

ಹೆಗಡೆಯವರಿಗೆ ಅಹಂ ಎಷ್ಟು ಜಾಸ್ತಿಯಾಗಿದೆಯೆಂದರೆ ತನ್ನನ್ನು ಆನೆಗೆ ಹೋಲಿಸಿಕೊಂಡು ಮಾಧ್ಯಮದವರನ್ನು ಹೀಯಾಳಿಸಿದ ಪರಿ ನೋಡಿದರೆ ಸ್ಥಿಮಿತ ಕಳೆದುಕೊಂಡವರಂತೆ ಭಾಸವಾಗುತ್ತಿದೆ. ಅಲ್ಲದೇ ನಿನ್ನೆ ಅಂಕೋಲಾ ತಾಲ್ಲೂಕಿನಲ್ಲಿ ಹೆಲ್ಮೆಟ್ (Helmet) ಹಾಕಿಕೊಳ್ಳದೇ ಬೆಂಬಲಿಗರೊಂದಿಗೆ ಬೈಕ್ ರ‍್ಯಾಲಿ ನಡೆಸಿರುವ ಹೆಗಡೆಯವರು ಕಾನೂನಿಗೆ ಸ್ವಲ್ಪವೂ ಗೌರವ ಕೊಡದೇ ಕಾನೂನನ್ನು ಉಲ್ಲಂಘಿಸಿರುವುದು ಎದ್ದುಕಾಣುತ್ತದೆ.

ಅಲ್ಲದೇ ಜ್ಯಾತ್ಯಾತೀತ ತತ್ವದಡಿಯಲ್ಲಿ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ ಸಮಾನತೆ ತರುವ ನಿಟ್ಟಿನಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ರವರ ನೇತ್ರತ್ವದಲ್ಲಿ ರಚನೆಯಾದ ಭಾರತ ದೇಶದ ಸಂವಿಧಾನ ಬದಲಾಯಿಸುವ ಅನಂತ್ ಕುಮಾರ್ ರವರ ಹೇಳಿಕೆಯನ್ನು ಗಮನಿಸಿದರೆ ಕೇವಲ ಅವರಿಗೆ ವೋಟ್ ಹಾಕಿ ಗೆಲ್ಲಿಸಲು ಮಾತ್ರ ಹಿಂದು ಧರ್ಮದಲ್ಲಿ ಇರುವ ಹಿಂದುಳಿದ ವರ್ಗ,ದಲಿತರು, ಬಡ, ಮಧ್ಯಮ ವರ್ಗದ ಅವಶ್ಯಕತೆ ಇರುವುದು ಕಂಡುಬರುತ್ತದೆ.

ಈಗಿನ ಭಾರತ ದೇಶದ ಸಂವಿಧಾನ ಇರುವುದರಿಂದ ಮಾತ್ರ ಹಿಂದು ಧರ್ಮದಲ್ಲಿ ಇರುವ ಹಿಂದುಳಿದ ವರ್ಗ, ದಲಿತ ವರ್ಗ,ಬಡ,ಮಧ್ಯಮ ವರ್ಗದವರು ಆರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ ಅಭಿವೃದ್ಧಿ ಸಾಧಿಸುತ್ತಾ ಸಮಾನತೆ ಪಡೆಯುವ ಹಾದಿಯಲ್ಲಿ ಸಾಗುತ್ತಿದ್ದಾರೆ.

ಅನಂತಕುಮಾರ್ ಹೆಗಡೆಯವರು ಸಂವಿಧಾನ ಬದಲಿಸಲು ಹೊರಟರೆ ಇಷ್ಟು ದಿನ ಇವರನ್ನು ಸಂಸದ ಸದಸ್ಯರನ್ನಾಗಿ ಆಯ್ಕೆ ಮಾಡಿದ ಹಿಂದೂ ಧರ್ಮದ ಹಿಂದುಳಿದ ವರ್ಗ, ದಲಿತ ವರ್ಗ, ಬಡ, ಮಧ್ಯಮ ವರ್ಗದವರ ಪಾಡೇನು? ಇಷ್ಟು ದಿನ ಹಿಂದೂ ಧರ್ಮವನ್ನು ರಕ್ಷಣೆ ಮಾಡುತ್ತೇನೆ ಎಂದು ಬೊಬ್ಬಿರಿಯುತ್ತಿದ್ದ ಹೆಗಡೆಯವರು ಈಗ ತನಗೆ ಮತ ನೀಡಿ ಆಯ್ಕೆ ಮಾಡಿರುವ ಜನರ ಮೂಲಕ್ಕೇ ಕೊಡಲಿಯೇಟು ಹಾಕುತ್ತೇನೆ ಎಂದ ಹಾಗಲ್ಲವೇ ಇವರ ಮಾತಿನ ಅರ್ಥ.. ಹದ್ದು ಮೀರಿ ಕಾನೂನುಬಾಹಿರವಾಗಿ ಅಸಾಂವಿಧಾನಿಕ ಮಾತನಾಡುತ್ತಿರುವ ಇಂತಹವರಿಗೆ ನ್ಯಾಯಾಂಗ ಇಲಾಖೆಯೇ ಸ್ವಯಂ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ.