suddibindu.in
Ankola: ಅಂಕೋಲಾ : ಕುತ್ತಿಗೆಗೆ ಚಾಕು(Attempted murder) ಹಾಕಿ ಕೊಲೆಗೆ ಯತ್ನಿಸುತ್ತಿದ್ದ ವ್ಯಕ್ತಿಯಿಂದ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರದ ಘಟನೆ ತಾಲೂಕಿನ ಮಂಜಗುಣಿಯ ತಾರಿಯ ಬಳಿ ನಡೆದಿದೆ.
ಬೆಳಂಬಾರದ ಮುಡ್ರಾಣಿಯ ಗಂಗಾಧರ ಸುಕ್ರು ಗೌಡ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದಾನೆ.ಬೆಳಂಬಾರ ತಾಳೇಬೈಲನ ಗಂಗಾಧರ ಗೌಡ ಅವರು ಭಾನುವಾರ ರಾತ್ರಿ ತನ್ನ ಮನೆಗೆ ಹೋಗಲು ಕುಂಬಾರಕೇರಿಯ ಬಳಿ ನಿಂತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ, ಗಂಗಾಧರ ಗೌಡನನ್ನು ಬೆಳಂಬಾರಕ್ಕೆ ಬಿಡುತ್ತೇನೆ ಎಂದು ತನ್ನ ಬೈಕನಲ್ಲಿ ಕುಳಿಸಿಕೊಂಡು ಸಾಗಿದ್ದಾನೆ.
ಬೈಕ್ನಲ್ಲಿ ಸಾಗುತ್ತಿರುವಾಗ ಬೈಕ್ ಸವಾರನು ತನಗೆ ಮಂಜಗುಣಿಯಲ್ಲಿ ಬಳಿ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಮಂಜುಗುಣಿಯ ತಾರಿಯ ಬಳಿಯ ನಿರ್ಜನ ಪ್ರದೇಶಕ್ಕೆ ಗಂಗಾಧರ ಗೌಡನನ್ನು ಕರೆದುಕೊಂಡು ಹೋಗಿ ಹಿಂಬದಿಯಿAದ ಬಂದು ಕುತ್ತಿಗೆಯನ್ನು ಹಿಡಿದುಕೊಂಡು ನಿರ್ದಾಕ್ಷಿಣ್ಯವಾಗಿ ಕುತ್ತಿಗೆ ಚಾಕುವಿನಿಂದ ಇರಿದಿದ್ದಾನೆ.
ಇದನ್ನೂ ಓದಿ:-
- ವಾಹನ ಸವಾರರಿಗೆ ಎಚ್ಚರಿಕೆ.! ಹೆದ್ದಾರಿ ಎರಡೂ ತಿಂಗಳು ಬಂದ್
- ಕೋನಳ್ಳಿ ಚಾತುರ್ಮಾಸ್ಯದ ಶ್ರೀಗಳ ಕುಟೀರ ಲೋಕಾರ್ಪಣೆ
- ಮುದಗಾ ಬಳಿ ಕಾರು-ಟಾಟಾ ಏಸ್ ಅಪಘಾತ: ಓರ್ವನಿಗೆ ಗಾಯ
ಎದ್ದೊ ಬಿದ್ದು ಆತನಿಂದ ತಪ್ಪಿಕೊಂಡು ಬಂದ ಗಂಗಾಧರ ಗೌಡ, ರಸ್ತೆಯ ಬದಿಯ ಚರಂಡಿಯೊಳಗೆ ಅವಿತುಕೊಂಡು ರಾತ್ರಿ ಕಳೆದಿದ್ದಾನೆ. ಬೆಳಿಗ್ಗೆ ಅಂಕೋಲಾ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಈ ಬಗ್ಗೆ ಗಂಗಾಧರ ಗೌಡ ಪೊಲೀಸ್ ದೂರನ್ನು ನೀಡಿದ್ದು ಈ ಬಗ್ಗೆ ಸೂಕ್ತ ಕೈಗೊಂಡು ರಕ್ಷಣೆ ಒದಗಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಈ ವ್ಯಕ್ತಿಯನ್ನು ಪರಿಚಯಿಸುವದಾಗಿ ಗಂಗಾಧರ ಗೌಡ ದೂರಿನಲ್ಲಿ ವಿವರಿಸಿದ್ದು, ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಈ ಘಟನೆಯಿಂದಾಗಿ ಈ ಬಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿ ಆರೋಪಿಯ ಪತ್ತೆಗೆ ಬಲೆ ಬಿಸಿದ್ದಾರೆ.