ಸುದ್ದಿಬಿಂದು ಬ್ಯೂರೋ
ಹೊನ್ನಾವರ
: ಪೊಲೀಸ್ ಠಾಣೆಗೆ ವಿಚಾರಣೆಗೆಂದು ವ್ಯಕ್ತಿ ಓರ್ವನಿಗೆ ಠಾಣೆಗೆ ಕರೆತಂದಿದ್ದ ವೇಳೆ ಆತ ವಿಷ ಸೇವನೆ ಮಾಡಿ ಸಾವನ್ನಪ್ಪಿರುವ ಪ್ರಕರಣದಲ್ಲಿ ಪಿಎಸ್ಐ ಸೇರಿ ಐವರನ್ನ ಅಮಾನತು ಮಾಡಲಾಗದೆ.

ಬಿಹಾರ ಮೂಲದ ದಿಲೀಪ್ ಮಂಡಲ್ (37) ಎಂಬಾತನೆ ಸಾವನ್ನಪ್ಪಿದ ವ್ಯಕ್ತಿಯಾಗಿದ್ದ. ಈತ ಬಂಗಾರ ತೊಳೆದುಕೊಡುವ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಹೊನ್ನಾವರ ಪಟ್ಟಣದ ತುಳಸಿನಗರದಲ್ಲಿ ಬಂಗಾರ ಸ್ವಚ್ಛಗೊಳಿಸಿಕೊಡುತ್ತಿದ್ದ, ಈತನ ವಿರುದ್ದ ಕಳ್ಳತನ ಆರೋಪದ ಇತ್ತು ಎನ್ನಲಾಗಿದ್ದು, ಆ ಕಾರಣಕ್ಕಾಗಿ ವಿಚಾರಣೆಗಾಗಿ ಠಾಣೆಗೆ ಕರೆತರಲಾಗಿತ್ತು ಎನ್ನಲಾಗಿದೆ, ಈ ವೇಳೆ ಠಾಣೆಯಲ್ಲಿ ಕೂರಿಸಿದಾಗ ನೀರು ಕುಡಿಯುವುದಾಗಿ ಹೇಳಿ ಬ್ಯಾಗಿನಲ್ಲಿದ್ದ ಬಂಗಾರ ತೊಳೆಯುವ ರಾಸಾಯನಿಕ ಸೇವಿಸುತ್ತಿದ್ದು , ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಪ್ರಕರಣದಲ್ಲಿ ಠಾಣೆಯ ಪಿ.ಐ ಮಂಜುನಾಥ್, ಠಾಣೆಯ ಕ್ರೈಂ ಪಿ.ಎಸ್.ಐ ಮಂಜೇಶ್ವರ್ ಚಂದಾವರ, ಪೊಲೀಸ್ ಸಿಬ್ಬಂದಿಗಳಾ ಮಹಾವೀರ,ರಮೇಶ್, ಸಂತೋಷ್ ಅಮಾನತ್ ಆಗಿದ್ದಾರೆ.