ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರು: 500ಕ್ಕಿಂತ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಹಾಸ್ಯ ಪಾತ್ರದ ಮೂಲಕ‌ ಪ್ರೇಕ್ಷಕರನ್ನು ನಕ್ಕು-ನಗಿಸಿದ ಹಾಸ್ಯನಟ ಬ್ಯಾಂಕ್ ಜನಾರ್ದನ್ (76) ವಿಧಿವಶರಾಗಿದ್ದಾರೆ. ನಟ ಬ್ಯಾಂಕ್ ಜನಾರ್ದನ್ ಇಂದು ಬೆಳಗಿನ ಜಾವ ಸುಮಾರು 2:30ರ ಸಮಯದಲ್ಲಿ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ಕೊನೆಯುಸಿರೆಳೆದರು. ಬ್ಯಾಂಕ್ ಜರ್ನಾಧನ್ ನಿಧಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಅವರ ಪಾರ್ಥಿವ ಶರೀರವನ್ನು ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಮಧ್ಯಾಹ್ನ 3 ರಿಂದ 4ರ ನಡುವೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬ್ಯಾಂಕ್ ಜನಾರ್ದನ್ ಅವರು 1948ರಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಜನಿಸಿದರು. 1985ರಲ್ಲಿ ಬಿಡುಗಡೆಯಾದ ‘ಪಿತಾಮಹ’ ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ನಾಟಕಗಳಿಂದ ಪ್ರಾರಂಭವಾದ ಅವರ ಕಲಾಜೀವನವು ನಂತರ ಚಲನಚಿತ್ರಗಳತ್ತ ತಿರುಗಿತು. ಆರಂಭದಲ್ಲಿ ಅವರು ಸಣ್ಣ ಪಾತ್ರಗಳಲ್ಲಿ ನಟಿಸಿದರು, ಆದರೆ ನಂತರ ಪ್ರಮುಖ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಕರ್ನಾಟಕದ ಮನೆಮಾತಾದರು. ಹಾಸ್ಯನಟ ಮತ್ತು ಪೋಷಕ ನಟರಾಗಿಯೇ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಅವರು 800ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಅವರು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಿಂದಲೇ ಅವರಿಗೆ ‘ಬ್ಯಾಂಕ್ ಜನಾರ್ದನ್’ ಎಂಬ ಹೆಸರು ಸಿಕ್ಕಿತು. ನಂತರ ಅವರು ಸಂಪೂರ್ಣವಾಗಿ ಚಿತ್ರರಂಗಕ್ಕೆ ಬಂದು ತಮ್ಮದೇ ಆದ ಛಾಪು ಮೂಡಿಸಿದರು.

ಇದನ್ನೂ ಓದಿ