suddibindu.in

Gokarna :ಗೋಕರ್ಣ:ಪೊಲೀಸ್ ಸಿಬ್ಬಂದಿ ಓರ್ವ ತನ್ನ ಕಾರಿನಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಅಕ್ತಮ ಮದ್ಯ ಹಾಗೂ ಮದ್ಯ ಸಾಗಾಟ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನ ವಶಕ್ಕೆ ಪಡೆದುಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಓಂ ಬೀಚ್ ಬಳಿ ನಡೆದಿದೆ..

ಕದ್ರಾ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯಾಗಿರುವ ಸಂತೋಷ ಲಮಾಣಿ ತನ್ನ ಕಾರಿನಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಗೋವಾ ಮದ್ಯವನ್ನ ಗೋಕರ್ಣದಲ್ಲಿರುವ ಕೆಲವು ರೆಸಾರ್ಟ್ ಹಾಗೂ ಹೋ ಸ್ಟೇಗಳಿಗೆ ಪೊರೈಕೆ ಮಾಡಲು ಸಾಗಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟವಾಗುತ್ತಿದೆ ಎನ್ನುವ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ಕಾರನ್ನ ತಡೆಯಲು ಹೋದ ಸಮಯದಲ್ಲ ಕಾರ ಚಲಿಸುತ್ತಿದ್ದ ಅಕ್ರಮ ಮದ್ಯ ಸಾಗಿಸುತ್ತಿದ್ದ ಪೊಲೀಸ ಸಿಬ್ಬಂದಿ ತನ್ನ ಹಿಡಿಯಲು ಬಂದ ಪೊಲೀಸರ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ

ಈತ ಸದ್ಯ ಕದ್ರಾ ಪೊಲೀಸ್ ಠಾಣೆಯಲ್ಲಿ ಇದ್ದಕೊಂಡೆ “ಸಂತೋಷವಾಗಿ” ಮದ್ಯಮಾರಾಟ ಮಾಡುತ್ತಲೆ ಕರ್ತವ್ಯದಲ್ಲಿರುವುದಾಗಿ ಗೋಕರ್ಣ ಪೊಲೀಸರು ಮದ್ಯ ವಶಕ್ಕೆ ಪಡೆದ ನಂತರದಲ್ಲಿ ಬಹಿರಂಗವಾಗಿದೆ.ಈತ ಠಾಣೆಗೆ ಬಂದಾಗಿನಿಂದಲ್ಲೂ ಜಿಲ್ಲಾದ್ಯಂತ ಇರುವ ರೆಸಾರ್ಟ್ ಹಾಗೂ ಹೋಂ ಸ್ಟೇಗಳಿಗೆ ಮದ್ಯ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಕೆಲಮೊಮ ಯುನಿಫಾರ್ಮ ಮೇಲೆಯೇ ಕಾರನಲ್ಲಿ ಲಕ್ಷಾಂತರ ರೂಪಾಯಿ ಗೋವಾ ಮದ್ಯವನ್ನ ಜಿಲ್ಲೆಯ ಬೇರೆ ಬೇರೆ ಕಡೆಗೆ ಮದ್ಯ ಸಾಗಾಟ ಮಾಡುವ ದಂಧೆ ನಡೆಸುತ್ತಿರುವುದು ಈ ಘಟನೆಯ ನಂತರದಲ್ಲಿ ಬಹಿರಂಗವಾಗಿದೆ‌.ಸದ್ಯ ಈ ಬಗ್ಗೆ ಗೋಕರ್ಣ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಅಬಕಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿ ಕಿರಾತಕ

ಈತ ಕಳೆದ ನಾಲ್ಕೈದು ತಿಂಗಳ ಹಿಂದೆ ಇದೆ ರೀತಿ ತನ್ನ ಕಾರಿನಲ್ಲಿ ಅಕ್ರಮ ಗೋವಾ ಮದ್ಯವನ್ನ ಸಾಗಾಟ ಮಾಡುತ್ತಿ ವೇಳೆ ಮಾಜಾಳಿ ಚೆಕ್ ‌ಪೊಸ್ಟ್‌ನಲ್ಲಿ ಅಬಕಾರಿ ಇಲಾಖೆಯ ಪೊಲೀಸರ ಕೈಗೂ ಸಿಕ್ಕಿ ಬಿದ್ದಿದ್ದ ಎನ್ನಲಾಗಿದೆ. ಆ ವೇಳೆ ಅಲ್ಲಿನ ಅಧಿಕಾರಿಗಳ ಕೈ ಕಾಲು ಹಿಡಿದು ಹೇಗೋ ಮಾಡಿ ಬಚಾವ್ ಆಗಿದ್ದ ಎನ್ನಲಾಗಿದೆ.ಅಂದು ನಡೆದ ಘಟನೆ ಅಲ್ಲಿಗೆ ಮುಚ್ಚಿಹಾಕಲಾಗಿತ್ತು ಎನ್ನುವುದು ಇದೀಗ ಬಹಿರಂಗವಾಗುತ್ತಿದೆ.

ವರ್ಗಾವಣೆ ಆಗಿದ್ದರು ಠಾಣೆಗೆ ಹಾಜಾರಾಗಿರಲಿಲ್ಲ

ಈತ ಅಕ್ರಮ ದಂಧೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಹಿಂದಿನ ಎಸ್ ಪಿ ಆಗಿದ್ದ ಸುಮ್ಮನಾ ಫೆನ್ನೇಕರ್ ಅವರು ಈತನ್ನ ಜೊಯೀಡಾ ರಾಮನಗರ ಠಾಣೆಗೆ ವರ್ಗಾವಣೆ ಮಾಡಿದ್ದರು ಎನ್ನಲಾಗಿದೆ. ಆದರೆ ಈತ ಅಲ್ಲಿನ ಠಾಣೆಗೆ ಹಾಜಾರಾಗದೆ ಹಾಗೆ ಉಳಿದುಕೊಂಡು ಅವರ ವರ್ಗಾವಣೆ ಆದ ಬಳಿಕ ಅವರಿಬರ ಕೈ ಕಾಲು ಹಿಡಿದುಕೊಂಡು ಪುನಃ ಮಲ್ಲಾಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.