ಸುದ್ದಿಬಿಂದು ಬ್ಯೂರೋ
ಧಾರವಾಡ : ದೀಪಾವಳಿ ಹಬ್ಬದ ಆಚರಣೆಗೆಂದು ಪಟಾಕಿ ಖರೀದಿಸಿ ಬೈಕ್ ಮೇಲೆ ಮನೆಗೆ ಹೊರಟ್ಟಿದ್ದ ವೇಳೆ ಕ್ರೂಸರ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಹಾಗೂ ಕ್ರೂಸರ್ ವಾಹನದಲ್ಲಿದ್ದವರು ಸೇರಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ನವಲಗುಂದದಿಂದ ಪಟಾಕಿ ತೆಗೆದುಕೊಂಡು ಧಾರವಾಡಕ್ಕೆ ಹೊರಟಿದ್ದ ಬೈಕ್ ಸವಾರರಿಗೆ, ಎದುರಿಗೆ ಬರುತ್ತಿದ್ದ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಧಾರವಾಡದ ಶಿವಾಜಿ ಸರ್ಕಲ್ ಬಳಿಯ ಪ್ರದೇಶದ ನಿವಾಸಿಗಳು ಬೈಕಿನಲ್ಲಿ ತೆರಳುತ್ತಿದ್ದರು. ಬೈಕ್ ಸವಾರರು ಕುಡಿದ ಮತ್ತಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಕ್ರೂಸರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಕ್ರೂಸರ್ ವಾಹನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಾರ್ಮಿಕರಿದ್ದು, ಅವರೆಲ್ಲರೂ ನವಲಗುಂದ ತಾಲೂಕಿನ ಹನಸಿ, ಹೆಬ್ಬಾಳ ಹಾಗೂ ಬ್ಯಾಲ್ಯಾಳ ನಿವಾಸಿಗಳು ಎಂದು ಗೊತ್ತಾಗಿದೆ. ಸ್ಥಳಕ್ಕೆ ಶಿವಳ್ಳಿ, ಮಾರಡಗಿ ಗ್ರಾಮಸ್ಥರು ತೆರಳಿ ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.