ಸುದ್ದಿಬಿಂದು ಬ್ಯೂರೋ
ಮುಂಡಗೋಡ : ATM ನಿಂದ ಹಣ ಡ್ರಾ ಮಾಡಿ ಕೊಡುವುದಾಗಿ ಹೇಳಿ ಎಟಿಎಂ ಕಾರ್ಡ್ ಹಾಗೂ ಪಾರ್ಸ್ ವರ್ಡ್ ಪಡೆದುಕೊಂಡು ಕಾರ್ಡ್ ಅದಲು ಬದಲು ಮಾಡಿ ಹಣ ವಂಚನೆ(Fraud)ಮಾಡಿರುವ ಶಿವಮೊಗ್ಗ ಜಿಲ್ಲೆಯ ಮಹಿಳೆಯನ್ನ ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ(Police)ಜಿಲ್ಲೆಯ ಶಿಖಾರಿಪುರ(Shikaripura) ತಾಲೂಕಿನ ಶಿರಾಳಕೊಪ್ಪದ ಆರೋಪಿ ಮಹಿಳೆ ಕೌಸರಬಾನು ನಜೀರಸಾಬ ಹಿರೇಕರೂರು ಎಂಬಾಕೆಯೆ ಬಂಧಿತ ಮಹಿಳೆಯಾಗಿದ್ದಾಳೆ. ಬಂಧಿತ ‌ಮಹಿಳೆಯಿಂದ, 12 ಸಾವಿರ ರೂ. ಹಣ ವಶಕ್ಕೆ ಪಡೆಯಲಾಗಿದೆ.

ಉತ್ತರಕನ್ನಡ(uttara Kannada)ಜಿಲ್ಲೆಯ ಮುಂಡಗೋಡ ತಾಲೂಕಿನ ಮೈನಳ್ಳಿಯ ಸಹೀನಾಜ್ ಮಹಮ್ಮದ್ ಸಲೀಂ ಎಂಬುವವರ ಎಟಿಎಂ ನಿಂದ ಈ ಮಹಿಳೆ‌ ಬರೋಬ್ಬರಿ 69 ಸಾವಿರ ರೂ ಡ್ರಾ ಮಾಡಿ ವಂಚನೆ ಮಾಡಿದ್ದಳು.ಮುಂಡಗೋಡಿನ ಬಸ್ ನಿಲ್ದಾಣದ ಎದುರಿನಲ್ಲಿರೋ ಎಟಿಎಂ ನಲ್ಲಿ ಸಹೀನಾಜ್ ಮಹಮ್ಮದ್ ಸಲೀಂ ಹಣ ತೆಗೆಯಲು ಹೋಗಿದ್ದರು‌.

ಈ ವೇಳೆ ಸರತಿ ಸಾಲಿನಲ್ಲಿ ಹಿಂದೆ ನಿಂತಿದ್ದ ಅಪರಿಚಿತ ಮಹಿಳೆ ಎಟಿಎಂ ನಿಂದ ಹಣ ತೆಗೆದು ಕೊಡುವುದಾಗಿ ನಂಬಿಸಿದ್ದಳು.ಅದೇ ವೇಳೆ(ATM Password)ಎಟಿಎಂ ಪಾಸ್ ವರ್ಡ್ ಪಡೆದುಕೊಂಡಿದ್ದಳು. ಹಾಗೇ ದೂರುದಾರಳ ಎಟಿಎಂ ಕಾರ್ಡ್ ಎಗರಿಸಿ ಬೇರೆ ಕಾರ್ಡ್ ನೀಡಿ ಪರಾರಿಯಾಗಿದ್ದಳು. ಬಳಿಕ, ಆ ಎಟಿಎಂ ಕಾರ್ಡ ಮೂಲಕ ಬರೋಬ್ಬರಿ 69 ಸಾವಿರ ರೂ. ಡ್ರಾ ಮಾಡಿಕೊಂಡು ಪರಾರಿಯಾಗಿದ್ದಳು.

ವಂಚನೆ ಮಾಡಲಾಗಿದೆ ಎನ್ನುವ ಬಗ್ಗೆ ತಿಳಿದ ಸಹೀನಾಜ್ ಮಹಮ್ಮದ್ ಸಲೀಂ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.