ಸುದ್ದಿಬಿಂದು ಬ್ಯೂರೋ
ಉಡುಪಿ: ಲಂಗರು ಹಾಕಿದ್ದ ಬೋಟ್ ಗೆ ಬೆಂಕಿ ತಗುಲಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಕುಂದಾಪುರ ಸಮೀಪದ ಗಂಗೊಳ್ಳಿಯಲ್ಲಿ ಈ ಘಟನೆ ನಡೆದಿದೆ.

ಮೂಲಗಳ ಪ್ರಕಾರ, ಗಂಗೊಳ್ಳಿ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ದೀಪಾವಳಿ ಪೂಜೆ ನಡೆಯುತ್ತಿದ್ದ ವೇಳೆ ಅಗ್ನಿ ದುರಂತ ಸಂಭವಿಸಿದೆ. ಘಟನೆಯಲ್ಲಿ ಏಂಟು ಮೀನುಗಾರಿಕಾ ಬೋಟ್ ಗಳು,ಎರಡು ಬೈಕ್‌ಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಬಲೆಗಳು ಸುಟ್ಟು ಭಸ್ಮವಾಗಿವೆ.

ಪಟಾಕಿ ಸಿಡಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯ ಅಗ್ನಿಶಾಮಕ ದಳ ರಕ್ಷಣಾ ಕಾರ್ಯಾಚರಣೆ ನಡೆಸಿತು.ಆಕಸ್ಮಿಕ ಬೆಂಕಿ ಅನಾಹುತದಿಂದ 5 ಕೋಟಿಗೂ ಅಧಿಕ ನಷ್ಟ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಬಂದ ಮೀನುಗಾರರು ಕಣ್ಣೀರು ಹಾಕಿದ್ದಾರೆ. ಅನ್ನ ನೀಡುತ್ತಿದ್ದ ಮೀನುಗಾರಿಕಾ ಬೋಟುಗಳು ಕಣ್ಣೆದುರಲ್ಲೇ ಸುಟ್ಟು ಕರಕಲಾಗಿವೆ. ಮರದಿಂದ ನಿರ್ಮಾಣ ಮಾಡಿದ ಬೋಟುಗಳು ಆಗಿರುವ ಕಾರಣಕ್ಕೆ ಬೆಂಕಿ ಒಮ್ಮೆಲೆ ಹೊತ್ತಿಕೊಂಡಿತ್ತು. ಆದರೆ ಘಟನೆಗೆ ಕಾರಣವೇನು ಅನ್ನೋದು ಮಾತ್ರ ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ