ಸುದ್ದಿಬಿಂದು ಬ್ಯೂರೋ
ಮಂಗಳೂರು : ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿನಿ ಓರ್ವಳು ತಾನು ದಪ್ಪವಾಗಿದ್ದೇನೆ ಎನ್ನುವ ಕ್ಷುಲ್ಲಕ ಕಾರಣಕ್ಕೆ ತಾನು ಕಲಿಯುತ್ತಿದ್ದ ಮೆಡಿಕಲ್ ಕಾಲೇಜಿನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಎಜೆ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಅಥಣಿಯ ತಾಲೂಕಿನ ಪ್ರಕೃತಿ ಶೆಟ್ಟಿ (20)ಆತ್ಮಹತ್ಯೆ ಎಂಬಾಕೆಯೆ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿಯಾಗಿದ್ದಾಳೆ.ತಾನು ದಪ್ಪವಾಗಿದ್ದು ನೋಡಲು ಅಂದವಾಗು ಕಾಣಿಸುತ್ತಿಲ್ಲ ಎನ್ನುವ ಕಾರಣಕ್ಕೆ ಡೆತ್ ನೋಟ್ ಬರೆದಿಟ್ಟು ಈಕೆ ಎಜೆ ಮೆಡಿಕಲ್ ಕಾಲೇಜಿನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ಇನ್ನೂ ಈ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್ ನೋಟ ಒಂದರಲ್ಲಿ ನನಗೆ ಎಂಬಿಬಿಎಸ್ ಮುಗಿಸಬೇಕು ಎಂದು ತುಂಬಾ ಆಸೆ ಇತ್ತು ಆದರೆ ನಾನು ತುಂಬಾ ದಪ್ಪವಾಗಿರುವುದರಿಂದ ಚೆನ್ನಾಗಿ ಕಾಣಿಸುತ್ತಿಲ್ಲ. ತೂಕ ಇಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು ಅದು ಕೂಡ ಆಗಿಲ್ಲ ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆಕೆ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾಳೆ. ಈ ಕುರಿತಾಗಿ ಕದ್ರಿ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.