ಸುದ್ದಿಬಿಂದು ಬ್ಯೂರೋ
ಶಿರಸಿ; ಪುತ್ರನ ಸಾವಿನ ನೋವಿನಲ್ಲಿ ತಾಯಿ ಹಾಗೂ ಸಹೋದರಿ ಇಬ್ನರೂ ಸೇರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡು ಬೆಳಲೆ ಗ್ರಾಮದಲ್ಲಿ ನಡೆದಿದೆ.
ಅನಾರೋಗ್ಯಕ್ಕೆ ಒಳಗಾಗಿದ್ದ ಯುವಕ ಉದಯ ಬಾಲಚಂದ್ರ ಹೆಗಡೆ (22) ಮೃತಯುವಕನಾಗಿದ್ದಾನೆ. ಇಂದು ಬೆಳಗ್ಗೆ 6 ಗಂಟೆಗೆ ತನ್ನ ಮನೆಯಲ್ಲೇ ಉದಯ ಸಾವನ್ನಪ್ಪಿದ್ದ ಪುತ್ರನ ಮೃತದೇಹದ ಪಕ್ಕದಲ್ಲೇ ಕುಳಿತು ಕಣ್ಣೀರು ಹಾಕುತ್ತಿದ್ದ ಆತನ ತಾಯಿ ಹಾಗೂ ಸಹೋದರಿ ಮನೆಯೊಳಗೆ ಹೋಗಿ ತಾಯಿ ನರ್ಮದಾ ಬಾಲಚಂದ್ರ ಹೆಗಡೆ (50) ಹಾಗೂ ಸಹೋದರಿ ದಿವ್ಯಾ ಬಾಲಚಂದ್ರ ಹೆಗಡೆ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಉದಯ ಕರೊನಾ ಸಂದರ್ಭದಲ್ಲಿ ಆನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲೆ ಚಿಕಿತ್ಸೆ ಒಳಗಾಗಿದ್ದ. ಮನೆ ಮಗನ ಸಾವು ಕಂಡು ನೋವಿನಿಂದ ತಾಯಿ ಹಾಗೂ ಸಹೋದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.