ಸುದ್ದಿಬಿಂದು ಬ್ಯೂರೋ
ಕುಮಟಾ : ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟದಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹೊಂಡೆಯಾಟ ಇದೀಗೂ ಜೀವಂತವಾಗಿದೆ. ದೀಪಾವಳಿಯ ಕೊನೆಯ 2ದಿನಗಳ ಕಾಲ ಎಲ್ಲಾ ಸಮಾಜದವರು ಸೇರಿ ಸ್ನೇಹತ ಸಂಕೇತವಾಗಿರುವ ಆಡುವ ಪಪ್ಪಾಯಿ ಆಟ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ.

ನಾಮಧಾರಿ, ಕೋಮಾರಪಂತ, ಹಾಲಕ್ಕಿ ಗೌಡ ಸಮುದಾಯದ ಯುವಕರು ಹೊಂಡೆಯಾಟದಲ್ಲಿ ತೊಡಗಿಕೊಳ್ಳುವುದು ವಿಶೇಶ. ದೇವರಹಕ್ಕಲದ ಶಾಂತಿಕಾ ಪರಮೇಶ್ವರಿ ದೇವಸ್ಥಾನದಿಂದ ಆರಂಭವಾಗುವ ಹೊಂಡೆಯಾಟ ಸುಭಾಸ ರಸ್ತೆ ಮಾರ್ಗವಾಗಿ ಪಿಕಪ್ ಬಸ್ಟ್ಯಾಂಡ್ ತಲುಪುತ್ತದೆ. ಅಲ್ಲಿ ಶಶಿಹಿತ್ತಲ-ಗುಂದಾ ಕಡೆಯಿಂದ ಬಂದ ಕೋಮಾರಪಂತ ಸಮುದಾಯದ ಯುವಕರು ಒಟ್ಟಿಗೆ ಸೇರಿಕೊಂಡು ಹೊಂಡೆಯಾಡುತ್ತಾರೆ. ಅಲ್ಲಿಂದ ರಥಬೀದಿ, ಮೂರುಕಟ್ಟೆ ಮಾರ್ಗವಾಗಿ ತೆರಳುವಾಗ ಹಾಲಕ್ಕಿ ಮತ್ತು ಮುಕ್ತಿ ಸಮಾಜದ ನಂತರ ಈ ಹೊಂಡೆಯಾಟ ಗಿಬ್ ಸರ್ಕಲ್ಲಿನ ಹುಲಿದೇವರ ಕಟ್ಟೆಯಲ್ಲಿ ಕೊನೆಗೊಳ್ಳುತ್ತದೆ.

ಇದನ್ನ ಈ ಹಿಂದೆ ಕಲ್ಲಿನಿಂದ ಹೊಂಡೆಯಾಡುವ ಪದ್ಧತಿ ಇತ್ತು. ಕಲ್ಲಿನ ಹೊಡೆತಕ್ಕೆ ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದರಿಂದ ಅಂದಿನ ಬ್ರಿಟಿಷ್ ಸರ್ಕಾರ ಈ ಅನಿಷ್ಟ ಪದ್ಧತಿಯನ್ನು ನಿಷೇಧಿಸಿತ್ತು ಎನ್ನಲಾಗಿದೆ. ನಂತರ ತೆಂಗಿನಕಾಯಿಂದ ಹೊಂಡೆಯಾಟ ನಡೆಯುತ್ತಿತ್ತು. ಈಗ ಪಪ್ಪಾಯಿ ಬಳಸಿಕೊಂಡು ಹೊಂಡೆಯಾಡುವ ಪದ್ಧತಿ ಇಂದಿನ ಆಧುನಿಕ ‌ಯುಗದಲ್ಲಿಯೂ ಕೂಡ. ಪ್ರಚಲಿತದಲ್ಲಿದೆ.

ಈ ಹೊಂಡೆಯಾಟವನ್ನು ನೋಡಲು ನೂರಾರು ಜನರು ಸೇರುತ್ತಾರೆ. ಆಟಗಾರರಿಗೆ ಚಪ್ಪಾಳೆ ತಟ್ಟಿ ಪ್ರೊತ್ಸಾಹಿಸುತ್ತಾರೆ. ಕವಣೆಯಲ್ಲಿ ಪಪ್ಪಾಯಿಯನ್ನು ಇಟ್ಟು ಕೈಯಲ್ಲಿ ಕಂಬಳಿ ಸುತ್ತಿಕೊಂಡು ಕುಳಿತ ವ್ಯಕ್ತಿಗೆ ಹೊಡೆಯುವಾಗ ಹೊಡೆತವನ್ನು ಕುಳಿತ ವ್ಯಕ್ತಿಯು ತಪ್ಪಿಸಿಕೊಳ್ಳಬೇಕಾಗುತ್ತದೆ. ಒಮ್ಮೊಮ್ಮೆ ಈ ಹೊಡೆತದಿಂದ ಪೆಟ್ಟು ತಗಲುವುದು ಸಾಮಾನ್ಯ. ಈ ಪಪ್ಪಾಯಿ ಕವಣೆಯಲ್ಲಿ ಸುತ್ತಿಕೊಂಡು ರಭಸದಿಂದ ಹೊಡೆಯುವಾಗ ಆ ಪಪ್ಪಾಯಿ ಸಿಡಿದು ಜನರಿಗೆ ತಗುಲಿದಾಗ ನೆರೆದ ಜನರು ಕೂಹು ಹೊಡೆಯುವುದು ಜನರನ್ನು ರಂಜಿಸುತ್ತಾರೆ

.ಉಪ್ಪಿನಗಣಪತಿ, ದೇವರಹಕ್ಕಲ, ಚಿತ್ರಿಗಿ, ನೆಲ್ಲಿಕೇರಿ ಹಳೆ ಬಸ್ ನಿಲ್ದಾಣ, ಶಶಿಹಿತ್ತಲ-ಗುಂದಾ, ಬಸ್ತಿಪೇಟೆ, ಉಪ್ಪಾರಕೇರಿ, ಹಳಕಾರ ಸೇರಿದಂತೆ ಪಟ್ಟಣದ ವಿವಿಧ ಕಡೆ ಜನರು ಈ ಹೊಂಡೆ ಆಟದಲ್ಲಿ ತೊಡಗಿಕೊಳ್ಳುತ್ತಾರೆ.‌ ಹೀಗೆ ಒಬ್ಬರ ನಂತರ ಇನ್ನೊಬ್ಬರು ಸರದಿಯಂತೆ ಪಪ್ಪಾಯಿಂದ ಹೊಡೆಯುತ್ತಾ ಸಾಗುತ್ತಾರೆ.ದೀಪಾವಳಿ ಸಂದರ್ಭದಲ್ಲಿ ಕುಮಟಾದಲ್ಲಿ ಮಾತ್ರ ವಿಶೇಷವಾಗಿ ಈ ಹೊಂಡೆ ಹಬ್ಬವನ್ನ ಆಚರಿಕೊಂಡು ಬರಲಾಗುತ್ತಿದೆ.