ಸುದ್ದಿಬಿಂದು ಬ್ಯೂರೋ
Banvasi:ಬನವಾಸಿ :ಚಲಿಸುತ್ತಿದ್ದ ಓಮ್ನಿ ಒಂದಕ್ಕೆ ಆಕಸ್ಮಿಕ ಬೆಂಕಿ ಹೊತ್ತುಕೊಂಡು ಓಮ್ನಿ ಸಂಪೂರ್ಣ ಸುಟ್ಟುಕರಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯ ಹರೀಶಿ ರಸ್ತೆಯಲ್ಲಿ ನಡೆದಿದೆ.

ಓಮ್ನಿ ಚಲಿಸುತ್ತಿದ್ದ ವೇಳೆ ಓಮ್ನಿ ಒಳಗೆ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಗಮನಿಸಿದ ಓಮ್ನಿ ಚಾಲಕ ತಕ್ಷಣ ಓಮ್ನಿಯನ್ನ ನಿಲ್ಲಿಸಿ ಹೊರಗಿಳಿದಿದ್ದಾನೆ. ಆತ‌ ಹೊರ ಬಂದು ನೋಡುತ್ತಿರುವಾಗಲೇ ದೊಡ್ಡದಾಗಿ ಬೆಂಕಿ ಹತ್ತಿಕೊಂಡಿದ್ದು, ಇದರಿಂದಾಗಿ ಓಮ್ನಿ ಸಂಪೂರ್ಣ ಸುಟ್ಟುಕರಕಲಾಗಿದೆ.

ಬೆಂಕಿಯ ಅನಾಹುತದಲ್ಲಿ ಸುಟ್ಟುಕರಕಲಾಗಿರುವ ಓಮ್ನಿ ಚಿದಾನಂದ ಗಣಪತಿ ನಾಯ್ಕ ಎಂಬುವವರಿಗೆ ಸೇರಿದ್ದು ಎಂದು ಗೋತ್ತಾಗಿದೆ. ಈ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.