ಸುದ್ದಿಬಿಂದು ಬ್ಯೂರೋ
ಕಾರವಾರ
: ಬಟ್ಟೆ ವ್ಯಾಪಾರಿ ಓರ್ವ ಶೌಚಾಲಯಕ್ಕೆ ಹೋಗಿದ್ದ ವೇಳೆ ಆತನ ಬಳಿ ಇದ್ದ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನ ಪೊಲೀಸರು ಕ್ಷಿಪ್ರ ಕಾರ್ಯಚರಣೆ ಮೂಲಕ 24 ಗಂಟೆಯೊಳಗೆ ಬಂಧಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ನಡೆದಿದೆ.

ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಹಳೆ ಮೀನುಮಾರುಕಟ್ಟೆ ಎದುರು ಇರುವ ಶೌಚಾಲಯಕ್ಕೆ ಬಟ್ಟೆವ್ಯಾರಿ ನಾಸೀರ್ ಹುಸೇನ್ ಹೋಗಿದ್ದು, ಈ ವೇಳೆ ಆತನ ಬಳಿ ಇದ್ದ 50ಸಾವಿರ ಹಣ ಇದ್ದ ಬ್ಯಾಗ್ ಇರುವುದನ್ನ ಗಮನಿಸಿದ್ದ ಆರೋಪಿ ಹಣ ಸಹಿತ ಬ್ಯಾಗ್ ಎರಗಿಸಿದ್ದಾನೆ. ಕಾರವಾರ ನಗರದ ನಾಸೀರ್ ಹುಸೇನ್ ಎಂಬಾತನೆ ಹಣ ಕಳೆದುಕೊಂಡಿದ್ದ, ಬಟ್ಟೆ ವ್ಯಾಪಾರಿಯಾಗಿದ್ದ,

ಈತ ಬಟ್ಟೆ ವ್ಯಾಪಾರ ಮಾಡಕೊಂಡು ಬಂದಿದ್ದು, ವ್ಯಾಪಾರ ಮಾಡಿ ಬಂದ 50 ಸಾವಿರ ಹಣವನ್ನ ಬ್ಯಾಗ್ ಒಂದರಲ್ಲಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಆತ ಶೌಚಾಲಯಕ್ಕೆ ಹೋಗಿದ್ದನ್ನ ಗಮನಿಸಿದ ಆರೋಪಿ ಬ್ಯಾಗ್ ಸಹಿತ 50ಸಾವಿರ ರೂಪಾಯಿ ಹಣ ಕದ್ದು ಪರಾರಿಯಾಗಿದ್ದ, ಈ ಬಗ್ಗೆ‌ ನಾಸೀರ್ ಹುಸೇನ್ ಹಣ ಕಳೆದುಕೊಂಡಿರುವ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು,

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ನಗರ ಠಾಣೆ ಇನ್ಸಪೆಕ್ಟರ್ ಸಿದ್ಧಪ್ಪ ಬಿಳಗಿ ಅವರ ತಕ್ಷಣ ತಂಡವನ್ನ ರಚಿಸಿ ಕಾರ್ಯಚರಣೆಗೆ ಇಳಿದ 24 ಗಂಟೆ ಒಳಗಡೆ ಆರೋಪಿಯಾಗಿರುವ ಕೋಣೆನಾಲಾ ನಿವಾಸಿಯಾಗಿರುವ ಹಜರತ್ ಅಲಿ ಎಂಬಾತನಿಗೆ ಪೊಲೀಸರು ಬಂದಿಸಿ ವಿಚಾರಣೆ ಕೈಗೊಂಡಿದ್ದಾರೆ. ಬಂಧಿತ ಆರೋಪಿ ಈ ಹಿಂದಿನಿಂದಲ್ಲೂ ಇದ ರೀತಿ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ‌.