ಸುದ್ದಿಬಿಂದು ಬ್ಯೂರೋ
ಕಾರವಾರ
: ಸ್ವಾತಂತ್ರೋತ್ಸವ ಪರೇಡ್ ವೇಳೆ ಮಹಿಳಾ ಪಿಎಸ್ಐ ಓರ್ವರು ಕುಸಿದು ಬಿದ್ದರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಪೊಲೀಸ್ ಪರೇಡ್ ಮೈದಾ‌ನದಲ್ಲಿ ನಡೆದಿದೆ.


ಸೈಬರ್ ಅಪರಾಧ ಠಾಣೆಯ ಪಿಎಸ್ ಐ ಆಗಿರುವ ಕೋಕಿಲಾ ತಲೆಸುತ್ತಿ ಬಿದ್ದ ಕಮಾಂಡರ್ ಸ್‌ಐ ಆಆಗಿದ್ದಾರೆ.ಬೆಳಿಗ್ಗೆಯಿಂದ ಬಿಸಿಲಿನಲ್ಲೆ ನಿಂತಿದ್ದು, ಬಿಸಿಲಿಂದಾಗಿ ತಲೆ ಸುತ್ತು ಬಂದು ಮೈದಾನದಲ್ಲೆ ಕುಸಿದು ಬಿದ್ದಾರೆ. ತಕ್ಷಣ ಉಳಿದ ಸಿಬ್ಬಂದಿಗಳು ಪಿಎಸ್ ಐ ಅವರಿಗೆ ನೀರು ಕುಡಿಸಿ ಆರೈಕೆ ಮಾಡಿದ್ದು ಬಳಿಕ ಚೇತರಿಸಿಕೊಂಡ ಮಹಿಳಾ ಪಿಎಸ್ಐ ಅವರು ನಂತರ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ..