ಸುದ್ದಿಬಿಂದು ಬ್ಯೂರೋ
Sirsi : ಶಿರಸಿ : ಕೆಎಸ್ಆರ್‌ಟಿಸಿ(KSRTC) ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಅಪಘಾತ (Bus Accident) ಸಂಭವಿಸಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಕನ್ನಡ(Utarakannda)ಜಿಲ್ಲೆಯ ಶಿರಸಿ ತಾಲೂಕಿನ ಇಸಳೂರ್ ಗ್ರಾಮದ ಬಳಿ ನಡೆದಿದೆ.

KSRTC ಬಸ್ ಹಾಗೂ ಖಾಸಗಿ ಬಸ್ (Private Bus,) ನಡುವೆ ಈ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ಬೆಂಗಳೂರು ಕಡೆಯಿಂದ ಶಿರಸಿ ಕಡೆ ಬರುತ್ತಿದ್ದು , ಇನ್ನೂ ಕೆಎಸ್ ಆರ್ ಟಿಸಿ ಬಸ್ ಶಿರಸಿಯಿಂದ ಅಕ್ಕಿಹಾಲೂರು ಕಡೆ ಚಲಿಸುತ್ತಿತ್ತು ಎನ್ನಲಾಗಿದೆ. ಅಪಘಾತದ ರಭಸಕ್ಕೆ ಎರಡು ಬಸ್ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ‌.

ಇನ್ನೂ ಅಪಘಾತದಲ್ಲಿ ಗಾಯಗೊಂಡಿದ್ದ ಪ್ರಯಾಣಿಕರನ್ನ 108ವಾಹನದ ಮೂಲಕ ಶಿರಸಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ‌. ಅಪಘಾತ ಸ್ಥಳಕ್ಕೆ ಶಿರಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.