ಸುದ್ದಿಬಿಂದು ನ್ಯೂಸ್ ಡೆಸ್ಕ್
ಕಾರವಾರ : ಕಾಂಗ್ರೆಸ್ ನ ರಾಜ್ಯಮಟ್ಡದ ಹುದ್ದೆಯಲ್ಲಿರುವ ಉತ್ತರಕನ್ನಡ ಜಿಲ್ಲೆಯ ಕುಮಟ ಭಾಗದ ವ್ಯಕ್ತಿಯೋರ್ವ. ಅಮಾಯಕ ಯುವಕನೋರ್ವನಿಗೆ ಮಹಿಳೆಯಿಂದ ಚಪ್ಪಲಿ ಏಟು ಹೊಡೆಯುವಂತೆ ಪ್ರೋತ್ಸಾಹಿಸಿದ್ದಲ್ಲದ್ದೆ, ತಾನು ಕೂಡ ಆ ಯುವಕನಿಗೆ ಥಳಿಸಿರುವ ವಿಚಾರ ಇದೀಗ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಪಕ್ಷದ ಜಿಲ್ಲಾಘಟಕವೇ ಈ ಕೃತ್ಯದಿಂದ ತಲೆ ತಗ್ಗಿಸುವಂತಾಗಿದ್ದು, ಆತನಿಗೆ ಇನ್ನೂ ಹುದ್ದೆಯಲ್ಲಿ ಮುಂದುವರೆಸಿರುವುದು ಕಾಂಗ್ರೆಸ್ ವಿರುದ್ದ ಜನರು ಹಾದಿ ಬೀದಿಯಲ್ಲಿ ಮಾತನಾಡಿಕೊಳ್ಳುವಂತಾಗಿದೆ.

ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎನ್ನುವ ಬಗ್ಗೆ ಯಾವುದೇ ದಾಖಲೆ ರಹಿತ ಆರೋಪ ಬಂದರೆ.ಪಕ್ಷದಿಂದ ಉಚ್ಚಾಟನೆ ಮಾಡುವ ರಾಜ್ಯದ ಕಾಂಗ್ರೆಸ್ ನಾಯಕರು, ಓರ್ವ ರಾಜ್ಯಮಟ್ಟದ ಹುದ್ದೆಯಲ್ಲಿರುವ ವ್ಯಕ್ತಿ ಅಮಾಯಕ ಯುವಕನ ಮೇಲೆ ಸಾರ್ವಜನಿಕವಾಗಿ ಮಾನಹಾನಿ ಆಗುವ ರೀತಿಯಲ್ಲಿ ನಡೆಸಿರುವ ಕೃತ್ಯ ದಾಖಲೆ ಸಹಿತ ಸಿಕ್ಕಿದ್ದರೂ ಯಾಕೆ ಕ್ರಮ ಕೈಗೊಳ್ಳದೆ ಆತನ ಬೆಂಬಲಕ್ಕೆ ನಿಂತಿದ್ದಾರೆ ಎನ್ನುವುದು ಜಿಲ್ಲಾಮಟ್ಟದ ಹಿರಿಯ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ.

ಸದ್ಯ ಜಿಲ್ಲೆಯಲ್ಲಿ, ಕಾಂಗ್ರೆಸ್ ನ ರಾಜ್ಯಮಟ್ಟದ ನಾಯಕ ಎಂದು ಹೇಳಿಕೊಳ್ಳುವ, ವ್ಯಕ್ತಿಯ ಚಪ್ಪಲಿ ಜಟಾಪಟಿ ವಿಚಾರ ಗಲ್ಲಿಗಲ್ಲಿಯಲ್ಲಿ ಚರ್ಚೆ ಆಗುತ್ತಿದೆ.ಅದು ಆತ ಕಾಂಗ್ರೆಸ್ ನಾಯಕ ಆಗಿರೋಧಕ್ಕೆ ವಿರೋಧಿ ಬಣದವರು ಅದನ್ನೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದು, ಕಾಂಗ್ರೆಸ್ ಮುಖಂಡರು ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಇದರಿಂದಾಗಿ ಮುಜುಗರಕ್ಕೆ ಒಳಗಾಗಿರುವ ಜಿಲ್ಲೆಯ ಕಾಂಗ್ರೆಸ್ ‌ನಾಯಕರು, ಚಪ್ಪಲಿ ಜಟಾಪಟಿ ಸೂತ್ರದಾರಿ ಕಾಂಗ್ರೆಸ್ ರಾಜ್ಯಮಟ್ಟದ ನಾಯಕ ಎಂದು ಹೇಳಿಕೊಳ್ಳವ ಈತನಿಗೆ ಪಕ್ಷದಿಂದ ದೂರ ಇಡುವಂತೆ ರಾಜ್ಯ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ, ಕ್ರಮ‌ ಜರುಗಿಸದೆ ಹೋದರೆ ಮುಂದೆ ಆಗುವ ನಷ್ಟಕ್ಕೆ ತಾವುಗಳು ಜವಾಬ್ದಾರರಲ್ಲ ಎಂದು ಜಿಲ್ಲಾ ಕಾಂಗ್ರೆಸ್ ನಾಯಕರುಗಳು ರಾಜ್ಯನಾಯಕರಿಗೆ ಆತನಿಗೆ ನೀಡಿರುವ ಹುದ್ದೆಯಿಂದ ಕೆಳಗಿಳಿಸುವಂತೆ ರಾಜ್ಯ ನಾಯಕರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.