ಸುದ್ದಿಬಿಂದು ಬ್ಯೂರೋ
ಹೊನ್ನಾವರ : ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆತಂದಿದ್ದ ವ್ಯಕ್ತಿ ಓರ್ವ ಠಾಣೆಯಲ್ಲಿ ವಿಷ ಸೇವನೆ ಮಾಡಿ ಮೃತಪಟ್ಟ ಘಟನೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಬಿಹಾರ ಮೂಲದ ದಿಲೀಪ್ ಮಂಡಲ್(37) ಎಂಬಾತನೆ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ. ಈತ ಬಂಗಾರ ತೊಳೆದುಕೊಡುವ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಹೊನ್ನಾವರ ಪಣ್ಣದ ತುಳಸಿನಗರದಲ್ಲಿ ಬಂಗಾರ ಸ್ವಚ್ಛಗೊಳಿಸಿಕೊಡುತ್ತಿದ್ದ, ಈತನ ವಿರುದ್ದ ಕಳ್ಳತನ ಆರೋಪದ ಇತ್ತು ಎನ್ನಲಾಗಿದ್ದು, ಆ ಕಾರಣಕ್ಕಾಗಿ ವಿಚಾರಣೆಗಾಗಿ ಠಾಣೆಗೆ ಕರೆತರಲಾಗಿತ್ತು ಎನ್ನಲಾಗಿದ್ದು, ಈ ವೇಳೆ ಠಾಣೆಯಲ್ಲಿ ಕೂರಿಸಿದಾಗ ನೀರು ಕುಡಿಯುವುದಾಗಿ ಬ್ಯಾಗಿನಲ್ಲಿದ್ದ ಬಂಗಾರ ತೊಳೆಯುವ ರಾಸಾಯನಿಕ ಸೇವಿಸುತ್ತಿದ್ದಾನೆ ಎನ್ನಲಾಗಿದೆ. ಹೊನ್ನಾವರ ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ
!