ಸುದ್ದಿಬಿಂದು ಬ್ಯೂರೋ
ಶಿರಸಿ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಅವರು ಇಂದು ವಿಧಾನಸಭಾಧ್ಯಕ್ಷರ ಮೂಲಕ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಶಿರಸಿಯಲ್ಲಿರುವ ವಿಧಾನಸಭಾಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ತಮ್ಮ ಬೆಂಬಗರೊಂದಿಗೆ ಆಗಮಿಸಿದ ಕುಮಾರ ಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ. ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಕುಮಾರಸ್ವಾಮಿ ಅವರಿಗೆ ಪಕ್ಷ ಟಿಕೆಟ್ ನೀಡದೆ ಇರುವುದರಿಂದ ಅವರು ರಾಜೀನಾಮೆ ಸಲ್ಲಿಸಿದ್ದು, ಬಂಡಾಯ ಅಭ್ಯರ್ಥಿ ಆಗಿ ಕಣಕ್ಕಿಳಿಯಲ್ಲಿದ್ದಾರೆ.
ಈ ಬಾರಿ ಕೂಡ ನನ್ನಗೆ ಗೆಲ್ಲುವ ಎಲ್ಲಾ ಅವಕಾಶ ಇತ್ತು.ಮತ್ತು ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಪಕ್ಷ ಬಿಡಲು ಸಿ ಟಿ ರವಿ ಕಾರಣ.ಪಕ್ಷದ ವರಿಷ್ಟರಿಗೆ ಟಿಕೆಟ್ ಗಾಗಿ ಸಂಪರ್ಕಿಸಿದ್ದೆ ಯಾವುದೇ ಪ್ರಯೋಜನವಾಗಿಲ್ಲ.ನನಗೇನೂ ವಯಸ್ಸಾಗಿಲ್ಲ. ಸಿ ಟಿ ರವಿ ಪ್ರಧಾನ ಕಾರ್ಯದರ್ಶಿ ಆದ ನಂತರ ಇಲ್ಲ ಸಲ್ಲದ ಆರೋಪ ಮಾಡಿ ಕಿರುಕುಳ ನೀಡುತಾ ಬಂದಿದ್ದಾರೆ.
ತಮ್ಮ ವೈಯಕ್ತಿಯ ಕಾರಣಕ್ಕಾಗಿ ಪಕ್ಷದಿಂದ ಓಡಿಸಲು ಪ್ರಯತ್ನಿಸುತ್ತಿದ್ದರು. ಹುಚ್ಚು ನಾಯಿ ಓಡಿಸುವ ರೀತಿಯಂತೆ ಅವರ ಜನಾಂಗದವರನ್ನು ಎತ್ತಿಕಟ್ಟಿ ಓಡಿಸಿದರು. ಕ್ಷೇತ್ರದ ಜನರು ಅವರಿಗೆ ಒಂದು ದಿನ ಬುದ್ಧಿಕಲಿಸುತ್ತಾರೆ.ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ. ಮೂಡಿಗೆರೆ ಕ್ಷೇತ್ರದಲ್ಲಿ ನಾನೇ ಮುಂದಿನ ಶಾಸಕ ಎಂದು ಎಂಪಿಕುಮಾರ ಸ್ವಾಮಿ ಹೇಳಿದ್ದಾರೆ.