ಸುದ್ದಿಬಿಂದು
ಶಿರಸಿ : ಬಿಜೆಪಿಯಲ್ಲೀಗ ಒಬ್ಬರ ಹಿಂದೆ ಒಬ್ಬರಂತೆ ರಾಜೀನಾಮೆ‌ ನೀಡುವವರ ಸಂಖ್ಯೆ ಹೆಚ್ಚಾಗಿದ್ದು,ಇನ್ನೋರ್ವ ಬಿಜೆಪಿ ಟಿಕೆಟ್ ವಂಚಿತ ಶಾಸಕ ರಾಜೀನಾಮೆ ಸಲ್ಲಿಸಲ್ಲಿದ್ದು,ದಿನದಿಂದ ದಿನಕ್ಕೆ ಕೇಸರಿ ಪಡೆಯಲ್ಲಿ ರಾಜೀನಾಮೆ ಪರ್ವ ಮುಂದುವರೆದಿದ್ದು,ಹೈಕಮಾಂಡಗೆ ತಲೆ ಬಿಸಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆ ಬಿಜೆಪಿ ಶಾಸಕರಸಗಿದ್ದ ಎಂಪಿ ಕುಮಾರಸ್ವಾಮಿ ಅವರು ಶಿರಸಿಯಲ್ಲಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ಅಗಮಿಸಿ 11-30ರ ಸುಮಾರಿಗೆ ರಾಜೀನಾಮೆ ನೀಡಲಿದ್ದಾರೆ.

ನಿನ್ನೆಯಷ್ಟೆ ಹೊಸದುರ್ಗ ಬಿಜೆಪಿ ಶಾಸಕರಾಗಿದ್ದ ಗೊಳಿಹಟ್ಟಿ ಶೇಖರ್ ಅವರು ಶಿರಸಿಗೆ ಆಗಮಿಸಿ ರಾಜೀನಾಮೆ ಸಲ್ಲಿಸಿಹೋಗಿದ್ದಾರೆ. ಇದರ ಬೆನ್ನಲ್ಲೆ ಎಂಪಿ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಲು ಶಿರಸಿಗೆ ಆಗಮಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನೋರ್ವ ಬಿಜೆಪಿ ಟಿಕೆಟ್ ವಂಚಿತರಾಗಿರುವ ಮಾಜಿ ಡಿಸಿಎಂ (ಉಪಮುಖ್ಯಮಂತ್ರಿ) ಲಕ್ಣ್ಮಣ ಸವದಿ ಸಹ ಇಂದು ಇಲ್ಲವೆ ನಾಳೆ ಶಿರಸಿಗೆ ಆಗಮಿಸಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಕೂಡ ಇದೆ..