ಸುದ್ದಿಬಿಂದು ಬ್ಯೂರೋ
ಕಾರವಾರ (ಗೋವಾ)
: ರಾಜ್ಯಾದ್ಯಂತ ಕಳೆದ ಒಂದವಾರದಿಂದ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಜಲಪಾತಗಳು ಮೈದುಂಬಿ ಹರಿಯಲಾರಂಭಿಸಿದೆ. ಅದರಲ್ಲೂ ಕರ್ನಾಟಕ ಹಾಗೂ ಗೋವಾ(Karnataka Goa border)ಗಡಿಯಲ್ಲಿರುವ ದೂದ್ ಸಾಗರ್ (DudhSagar)ಜಲಪಾದ‌ ಅಪಾಯದ ಮಟ್ಟಮೀರಿ ದುಮ್ಮುಕ್ಕುತ್ತಿದ್ದು, ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ.

ಉತ್ತರಕನ್ನಡ ಸೇರಿದಂತೆ ರಾಜ್ಯಾದ ಬಹುತೇಕ ಜಿಲ್ಲೆಯಲ್ಲಿ ಕಣ್ಣುಮುಚ್ಚಿ‌ ಮಳೆ ಸುರಿಯುತ್ತಿದೆ.‌ ರೈಲು ಮೂಲಕ ಗೋವಾ ತೆರಳುವ ಮಾರ್ಗ ಮಧ್ಯದಲ್ಲಿರುವ ಈ(Falls) ಫಾಲ್ಸ್ ಇದೀಗ ಆಕಾಶದೆತ್ತರದಿಂದ ದುಮ್ಮುಕ್ಕುವಂತೆ ಕಂಡು ಬರುತ್ತಿದೆ. ಭಾರೀ ಪ್ರಮಾಣದಲ್ಲಿ ಇಲ್ಲಿ ನೀರು ಬಿಳುತ್ತಿರುವುದುದರಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲು ಸಹ ಆಮೇ ವೇಗದಲ್ಲಿ ಚಲಿಸುತ್ತಿದೆ. ಈ ಮಾರ್ಗವಾಗಿ ರೈಲ್ವೆ ಚಲಿಸುವಾಗ ಜಲಪಾದಿಂದ ದುಮ್ಮುಕ್ಕುವ ಹಾಲಿನ ನೊರೆಯಂತಿರುವ ಭಾರೀ ನೀರು ಚಲಿಸುವ ರೈಲ್ವೆಗೆ ಅಪಳಿಸಿದಂತೆ ಆಗುತ್ತಿದೆ.

ಜಲಪಾತಗಳು ತುಂಬಿ ಹರಿಯುತ್ತಿದ್ದು, ಇದನ್ನ ನೋಡಲೆಂದೆ ರಾಜ್ಯದ ನಾನಾಕಡೆಯಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಅಪಾಯದ ಮಟ್ಟದಲ್ಲಿ ಜಲಪಾದಿಂದ ದುಮ್ಮುಕ್ಕುತ್ತಿರುವುದರಿಂದ ಸ್ಥಳಕ್ಕೆ ಪ್ರವಾಸಿಗರು ಹೋಗದಂತೆ ಸಂಪೂರ್ಣ ನಿರ್ಬಂಧ ಹಾಕಲಾಗಿದೆ. ಇನ್ನೂ ಬಂದೋಬಸ್ತಗಾಗಿ ಅರೆ ಮಿಲಿಟರಿ ಹಾಗೂ ಪೊಲೀಸರನ್ನ ನಿಯೋಜನೆ ಮಾಡಲಾಗಿದ್ದು, ಯಾವೊಬ್ಬ ಪ್ರವಾಸಿಗರು ಕೂಡ ಇಲ್ಲದೆ ಬರದಂತೆ ಬೀಗು ಬಂದೋಬಸ್ತ್ ಮಾಡಲಾಗಿದೆ.