ಸುದ್ದಿಬಿಂದು ಬ್ಯೂರೋ
ಬೆಂಗಳೂರು : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ರವಿವಾರ ಇಲ್ಲ ಸೋಮವಾರ ಅಂತಿಮಗೊಳ್ಳುವ ಸಾಧ್ಯತೆ ಇದೆ. 120 ರಿಂದ 150 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಪುತ್ರನ ಜೊತೆ ಆಪ್ತರಿಗೆ ಟಿಕೆಟ್ ನೀಡುವಂತೆ ಬಿಎಸ್ ವೈ ಬ್ಯಾಟಿಂಗ್ ನಡೆಸುತ್ತಿದ್ದು, ಇದರ ಹಿಂದೆ ಯಡಿಯೂರಪ್ಪ ರಾಜಕೀಯ ಲೆಕ್ಕಾಚಾರದ ಕುರಿತಾಗಿ ರಣತಂತ್ರ ನಡೆಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ಹಾಗೂ ಕಾರವಾರ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿ ಬಿಡುಗಡೆ ಆಗುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಎರಡು ಕ್ಷೇತ್ರದಲ್ಲಿ ತಾನು ಹೇಳಿದ ಅಭ್ಯರ್ಥಿ ಗೆ ಟಿಕೆಟ್ ನೀಡಬೇಕು ಎಂದು ಮಾಜಿ ಸಿ ಎಂ ಬಿ ಎಸ್ ಯಡಿಯೂರಪ್ಪ ಪಟ್ಟು ಹಿಡಿದಿದ್ದು, ಬಹುತೇಕ ಪೈಲ್ ಆಗಿದೆ ಎನ್ನಲಾಗಿದೆ.


ಜಿಲ್ಲಡಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ವಿಧಾನಸಭಾ ಕ್ಷೇತ್ರದಲ್ಲಿ ತಾನು ಸೂಚನೆ ಮಾಡುವ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೈಕಮಾಂಡ ಎದುರು ಪಟ್ಟು ಹಿಡಿದ್ದಿದ್ದು, ಬಹುತೇಕ ಯಶಸ್ವಿಯಾಗಿದ್ದಾರೆ ಎನ್ನುವ ಬಗ್ಗೆ ಬಿಜೆಪಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಮೊದಲ ಪಟ್ಟಿಯಲ್ಲಿಯೇ ಜಿಲ್ಲೆಯ ಕಾರವಾರ ಹಾಗೂ ಕುಮಟಾ ಈ ಎರಡು ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಣೆ ಆಗುವ ಸಾಧ್ಯತೆ ಹೆಚ್ಚಾಗಿದೆ, ಸಚಿವರು ಹಾಗೂ ಸ್ಪೀಕರ್ ಇರುವ ಎರಡು ಕ್ಷೇತ್ರ ಸೇರಿ ಇನ್ನೂಳಿದ ನಾಲ್ಕು ಕ್ಷೇತ್ರದ ಅಭ್ಯರ್ಥಿ ಹೆಸರು ಎರಡನೇ ಪಟ್ಟಿಯಲ್ಲಿ ಬಿಡುಗಡೆ ಮಾಡ ಬಹುದಾಗಿದೆ.
ಇವರ ಜೊತೆಗೆ ತನ್ನ ಮಗನ ಹೆಸರನ್ನು ಸಹ ಮೊದಲ ಪಟ್ಟಿಯಲ್ಲೆ ಬಿಡುಗಡೆ ಮಾಡುವಂತೆ ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ಈ ವಿಚಾರ ಹೈಕಮಾಂಡ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ . ಇನ್ನೂ ಕಳೆದ 2018ರ ಚುನಾವಣೆಯಲ್ಲಿ ದಿನಕರ ಶೆಟ್ಟಿ ಹಾಗೂ ರೂಪಾಲಿ ನಾಯ್ಕ ಇವರಿಬ್ಬರಿಗೂ ಯಡಿಯೂರಪ್ಪ ಅವರ ಅವರ ಬೆಂಬಲದಿಂದಲ್ಲೆ ಟಿಕೆಟ್ ಪಡೆದಿದ್ದರು ಎನ್ನುವುದು ಬಿಜೆಪಿಯ ಎಲ್ಲಾ ಪ್ರಮುಖ ನಾಯಕರಿಗೂ ಗೋತ್ತಿರುವ ವಿಚಾರ.
ಕಳೆದ ಕೆಲ ದಿನಗಳ ಹಿಂದೆ ಕುಮಟಾ ಶಾಸಕರಾಗಿದ್ದ ದಿನಕರ ಶೆಟ್ಟಿ. ಟಿಕೆಟ್ ಗೊಂದಲದ ಬಗ್ಗೆ . ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿಯಾದ ನಂತರದಲ್ಲಿ ಯಡಿಯೂರಪ್ಪ ಅವರನ್ನ ಕೂಡ ಭೇಟಿ ಮಾಡಿರುವ ವಿಚಾರ ಅವರ ಆಪ್ತರಿಂದ ಗೋತ್ತಾಗಿದೆ.
ಆ ವೇಳೆ ಜೆಡಿಎಸ್ ನಲ್ಲಿ ಇದ್ದ ನಿಮ್ಮನ್ನ ಬಿಜೆಪಿಗೆ ಕರೆತಂದು ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬಂದಿದ್ದೇನೆ..ಈ ಬಾರೀ ಸಹ ಬದಲಾವಣೆ ಆಗದಂತೆ ನೋಡಿಕೊಳ್ಳುತ್ತೇನೆ. ನನ್ನ ಮಗ ಸಿಎಂ ರೇಸ್ ನಲ್ಲಿ ಇದ್ದಾನೆ. ನೀವೆಲ್ಲಾ ಶಾಸಕರಾದ ಬಳಿಕ ವಿಜಯೇಂದ್ರನಿಗೆ ಸಿ ಎಂ ಆಗಲು ಬೆಂಬಲ ನೀಡುವ ಕುರಿತು ಸಹ ಮಾತುಕತೆ ಮಾಡಿದ್ದಾರಂತೆ. ಬೆಂಬಲ ನೀಡುವ ಬಗ್ಗೆ ಒಪ್ಪಿಗೆ ನೀಡಿದ್ದಾರೆನ್ನಲಾಗಿದೆ.
ಇದೆ ರೀತಿ ರಾಜ್ಯದ ಇನ್ನೂ ಅನೇಕ ಕ್ಷೇತ್ರದಲ್ಲಿ ತಾನು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನುವ ಬಗ್ಗೆ ಬಿಜೆಪಿ ವಲಯದಿಂದಲ್ಲೆ ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ತನ್ನ ಮಗನಿಗೆ ಸಿ ಎಂ ಮಾಡಬೇಕು ಎನ್ನುವ ಗುರಿಯನ್ನ ಇಟ್ಟುಕೊಂಡು ಯಡಿಯೂರಪ್ಪ ತಮ್ಮ ಆಪ್ತರಿಗೆ ಟಿಕೆಟ್ ನೀಡಬೇಕು ಎಂದು ಹೈ ಕಮಾಂಡ ಮೇಲೆ ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ತನ್ನ ಬೆಂಬಲಿಗರು ಆಯ್ಕೆ ಆದಲ್ಲಿ ಮಗನಿಗೆ ಸಿ ಎಂ ಮಾಡಬೇಕು ಎನ್ನುವ ಕನಸು ನನಸಾಗಬಹುದು ಎನ್ನುವುದು ಬಿಎಸ್ ವೈ ರಾಜಕೀಯ ಲೆಕ್ಕಾಚಾರ.