ಸುದ್ದಿಬಿಂದು ಬ್ಯೂರೋ

ಕಾರವಾರ : ಸರಕಾರದ ವಿವಿಧ‌‌ ಕಾಮಗಾರಿಗಳನ್ನ ಪೂರ್ಣಮಾಡಿದ್ದರು. ಸರಕಾರ ಇದುವರೆಗೆ ಗುತ್ತಿಗೆದಾರರ ಒಂದೇ‌ ಒಂದು ರೂಪಾಯಿ ಹಣವನ್ನ‌ ಪಾವತಿ ಮಾಡಿಲ್ಲ.‌ ಮಾರ್ಚ್ ತಿಂಗಳ ಅಂತ್ಯದೊಳಗೆ ಎಲ್ಲಾ ಗುತ್ತಿಗೆದಾರರ‌ ಹಣ ಪಾವತಿ ಆಹಬೇಕಿತ್ತು. ಆದರೆ ಏಪ್ರೀಲ್ ‌ತಿಂಗಳು ಮುಗಿಯುವ ಹಂತಕ್ಕೆ ಬಂದರೂ ಇನ್ನೂ ಸರಕಾರ‌ ಹಣ ಪಾವತಿ ಮಾಡಿಲ್ಲ. ಹೀಗಾಗಿ ಏಪ್ರೀಲ್ 12ರಂದು ಧರಣಿ ಮಾಡಲಾಗುವುದು ಎಂದು ತಾಲೂಕಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯ್ಕ ಹೇಳಿದ್ದಾರೆ.

ಅವರು ಇಂದು ಶನಿವಾರ ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆಯನ್ನ ನೀಡಿದ್ದಾರೆ. ಗುತ್ತಿಗೆದಾರರಾದ ನಾವುಗಳು ಬ್ಯಾಂಕ್ ಗಳಲ್ಲಿ ಸಾಲ ಮಾಡಿಕೊಂಡು ಸರಕಾರ ನೀಡಿದ ಕಾಮಗಾರಿಯನ್ನ ಅವಧಿಗೆ ಸರಿಯಾಗಿ ಮುಗಿಸಿಕೊಟ್ಟಿದ್ದೇವೆ. ಆದರೆ ಮಾರ್ಚ್ ಕೊನೆಯಲ್ಲಿ ಸರಕಾರ ಎಲ್ಲಾ ಗುತ್ತಿಗೆದಾರರ ಹಣವನ್ನ ಪಾವತಿ ಮಾಡಬೇಕಿತ್ತು. ಆದರೆ ಅದನ್ನ ಇನ್ನೂವರೆಗೂ ಮಾಡಿಲ್ಲ.

ಏ. 12 ರಂದು ಬೆಳಗ್ಗೆ ಎರಡು ತಾಸು ನಗರಸಭೆ ಹಾಗೂ ಮಧ್ಯಾಹ್ನ ಲೋಕೋಪಯೋಗಿ ಇಲಾಖೆ ಎದುರು ಸಾಂಕೇತಿಕವಾಗು ಧರಣಿ ಮಾಡಲಾಗುವುದು. ಇದಾದ ಬಳಿಕವೂ ಸಹ ಸ್ಪಂಧಿಸದೆ ಹೋದಲ್ಲಿ ಸರಕಾರದ ಎಲ್ಲಾ ಕಾಮಗಾರಿಗಳನ್ನ ಸಂಪೂರ್ಣವಾಗಿ ಸ್ಥಗಿತ ಮಾಡುವ ನಿರ್ಧಾರ ಕೈಗೊಳ್ಳಲಾಗುವುದು.

ಬಿಲ್ ಆಗದೆ ಇರುವುದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳಗಾವಿಯ ಸಂತೋಷ ಪಾಟೀಲ್ ಅವರಂತೆ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ನಮ್ಮ ಕಾರವಾರ ಕ್ಷೇತ್ರದಲ್ಲಿ ವಿಧಾನಸೌಧ ಮಟ್ಟದಲ್ಲಿ ಅಧಿಕಾರಿಗಳ ಜತೆಗೆ ಉತ್ತಮ ಸಂಬಂಧ ಇದ್ದವರಿಗೆ ಮಾತ್ರ ಹಣ ಪಾವತಿ ಆಗಿದೆ. ಮಧ್ಯಮ ಹಾಗೂ ಸಣ್ಣ ಗುತ್ತಿಗೆದಾರರು ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಪ್ರಭಾವ ಹೊಂದಿರುವವರು ಕಾಮಗಾರಿಯನ್ನ ಮಾಡದೆ ಬಿಲ್ ಮಾಡಿಸಿಕೊಂಡಿರುವ ಉದಾರಣೆ ಸಹ ಇದೆ. ಆ ಬಗ್ಗೆ ದಾಖಲೆಗಳು ದೊರಕ್ಕಿದಲ್ಲಿ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ .