ಕಾರವಾರ: ಕಾರವಾರ- ಮಣಿಪಾಲ ಸಾರಿಗೆ ಬಸ್(Karwar- Manipal Transport Bus) ಅವ್ಯವಸ್ಥೆಯ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿಲ್ಲ. ಹೀಗೆ ಅಧಿಕಾರಿಗಳು ಜಡತ್ವ ಮುಂದುವರಿಸಿದರೆ ಪ್ರತಿಭಟನೆ ಎದುರಿಸಬೇಕಾದೀತು, ಮುಂದಾಗುವ ಅನಾಹುತಗಳಿಗೆ ಸಾರಿಗೆ ಇಲಾಖೆಯ ಹೊಣೆ ಹೊರಬೇಕಾಗಲಿದೆ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಎಚ್ಚರಿಕೆ ನೀಡಿದ್ದಾರೆ.
ಬೆಳ್ಳಂಬೆಳಿಗ್ಗೆ ಇಲ್ಲಿನ ಕಾರವಾರ ಬಸ್ ನಿಲ್ದಾಣದಿಂದ ಹೊರಡುವ ಮಣಿಪಾಲ ಬಸ್ ಕೊನೆಯ ನಿಲ್ದಾಣ ತಲುಪುವ ಮುನ್ನವೇ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿದೆ. ಒಮ್ಮೆ ಕುಮಟಾ, ಮತ್ತೊಮ್ಮೆ ಹೊನ್ನಾವರವಾದರೆ, ಸೋಮವಾರ ಕುಂದಾಪುರದಲ್ಲಿ(Kundapur) ಕೆಟ್ಟು ನಿಂತಿದೆ. ತಿಂಗಳಲ್ಲಿ ಆರೇಳು ಬಾರಿ ಹೀಗೆ ಆಗುತ್ತಿರುವ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತಂದರೂ ಲಕ್ಷö್ಯ ವಹಿಸಿದಂತೆ ಕಾಣುತ್ತಿಲ್ಲ.
ಸೋಮವಾರ ಬಸ್ ಕೆಟ್ಟು ನಿಂತಾಗ ಸುಮಾರು 90 ಪ್ರಯಾಣಿಕರು ಇದ್ದರೆಂಬುದು ತಿಳಿದುಬಂದಿದೆ. ಹೀಗೆ ಇಷ್ಟು ಜನಸಂದಣಿ ಇರುವ ಬಸ್ ಕೆಟ್ಟು ನಿಂತರೆ ಪ್ರಯಾಣಿಕರ ಪಾಡೇನು? ಅದರಲ್ಲೂ ಮಣಿಪಾಲದ ಆಸ್ಪತ್ರೆಗಳಿಗೆ(Manipal Hospital) ತೆರಳುವವರೇ ಹೆಚ್ಚಾಗಿ ಈ ಬಸ್ ಅವಲಂಬಿಸಿದ್ದಾರೆ.
ಆಸ್ಪತ್ರೆ ತೆರಳುವ ಮಾರ್ಗಮಧ್ಯೆಯೇ ಹೀಗೆ ಬಸ್ ಕೈಕೊಟ್ಟರೆ (KSRTC Bus Problem)ಬಡ ರೋಗಿಗಳ ಪರಿಸ್ಥಿತಿ ಏನಾಗಬೇಡ? ಅಧಿಕಾರಿಗಳು ಕರ್ತವ್ಯ ಪ್ರಜ್ಞೆಗಿಂತಲೂ ಹೆಚ್ಚು ಸ್ವಲ್ಪ ಮಾನವೀಯತೆ ತೋರಬೇಕಿದೆ. ಈ ತಿಂಗಳ ಒಳಗೆ ಬದಲಿ ಸುವ್ಯವಸ್ಥೆಯಲ್ಲಿರುವ ಬಸ್ ನೀಡದಿದ್ದರೆ ರೋಗಿಗಳೊಂದಿಗೆ ಪ್ರತಿಭಟನೆಗೆ ಕೂರಲಿದ್ದೇನೆ. ಸಾರಿಗೆ ಅಧಿಕಾರಿಗಳು ಪ್ರತಿಭಟನೆ ಎದುರಿಸಲು ಸಿದ್ಧರಾಗಿರಿ ಎಂದು ಅವರು ಮಾಧವ ನಾಯ್ಕ ಎಚ್ಚರಿಸಿದ್ದಾರೆ.