suddibindu.in
Karwar:ಕಾರವಾರ :ಉತ್ತರ ಕನ್ನಡ(uttarkannada)ಜಿಲ್ಲೆಯ ಕುಮಟಾ ತಾಲೂಕಿನ ಹೊಳೆಗದ್ದೆಯಲ್ಲಿ ಇತ್ತಿಚೆಗೆ ಟೋಲ್‌ ಸಿಬ್ಬಂದಿಗಳು ಹಲ್ಲೆ‌ ಮಾಡಿದರು ಅವರ ವಿರುದ್ಧ ಸ್ಥಳೀಯ ಪೊಲೀಸರು(Police,)ದೂರು ದಾಖಲಿಸಿಕೊಳ್ಳುವಲ್ಲಿ ಮೀನಾಮೇಷ ಮಾಡಿದ್ದಾರೆಂದು ಟೋಲ್ ಸಿಬ್ಬಂದಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾದ (Fatal Assault) ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಬಗ್ಗೆ ಕಾರವಾರದ(karwar)ಜಿಲ್ಲಾ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರ ನಡೆಯ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.ಫೆ 16ರಂದು ಹೊಳೆಗದ್ದೆ ಟೋಲ್‌ಗೇಟ್ ಮೂಲಕ ಮಂಗಳೂರು(Mangalore) ಕಡೆಯಿಂದ‌‌ ಬರುತ್ತಿದ್ದವೇಳೆ ಅಡ್ಡಗಟ್ಟಿ ನಮ್ಮ‌ ವಾಹನದಲ್ಲಿದ್ದ ಸಣ್ಣ ಮಕ್ಕಳು, ಮಹಿಳೆಯರು ಎನ್ನುವುದನ್ನ ನೋಡದೆ ಬಟ್ಟೆ ಹರಿದು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಅಷ್ಟೆ ಅಲ್ಲದೆ‌ ನಮ್ಮ ವಾಹನವನ್ನ ಸಹ ಧ್ವಂಸ ಮಾಡಿದ್ದಾರೆ. ಅವರು ನಡೆಸಿರುವ ಎಲ್ಲಾ ಕೃತ್ಯಗಳು ಕೂಡ ಅವರ ಸಿಸಿಕ್ಯಾಮರಾದಲ್ಲಿ (C C Camera) ಸೆರೆಯಾಗಿದೆ.

ಇದನ್ನೂ ಓದಿ

ಟೋಲ್ ಸಿಬ್ಬಂದಿ ಸತೀಶ್ ತಿಮ್ಮಪ್ಪ ಪಟಗಾರ್, ಕಿರಣ್ ಜೈವಂತ್ ನಾಯ್ಕ್, ಮಂಜುನಾಥ್ ವಿಠಲ್ ನಾಯ್ಕ್, ನಾಗರಾಜ ಮಹಾದೇವ ನಾಯ್ಕ್ ಮುಂತಾದವರು ಹಲ್ಲೆ ಮಾಡಿದ್ದಾರೆ. ಪೊಲೀಸರು ಈವರೆಗೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಮಾರಣಾಂತಿಕ ಹಲ್ಲೆ ನಡೆಸಿದರ ಕುಮಟಾ(kumta) ಪೋಲಿಸರು ಕೇವಲ‌ ಸಣ್ಣ ಪುಟ್ಟ ಕೇಸ್ ದಾಖಲಿಸಿ ಕೈ ಬಿಟ್ಟಿದ್ದಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.