ಸುದ್ದಿಬಿಂದು ಬ್ಯೂರೋ
ಕಾರವಾರ : ಸಿದ್ದರಾಮಯ್ಯ ಅವರು ಮುಂದಿನ ಐದು ವರ್ಷ ನಾನೇ ಸಿಎಂ ಎನ್ನುವ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಸಚಿವ ಮಂಕಾಳು ವೈದ್ಯ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದನ್ನ ಹೈಕಮಾಂಡ್ ನಿರ್ಧರಿಸಲಿದೆ ಎಂದಿದ್ದಾರೆ.
ಅವರು ಇಂದು ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ಸಿದ್ದರಾಮಯ್ಯCM Siddaramaiah) ನವರು ನಮ್ಮ ನಾಯಕರು.ರಾಜ್ಯದ ಜನ ನಮಗೆ 136 ಸ್ಥಾನ ಗೆಲ್ಲಿಸಿಕೊಟ್ಟಿದ್ದಾರೆ. ಐದು ವರ್ಷ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ.ಯಾರನ್ನ ಸಿಎಂ ಮಾಡಬೇಕು,ಎಷ್ಟು ವರ್ಷ ಮಾಡಬೇಕು ಎಂದು ಹೈಕಮಾಂಡ್ ನಿರ್ಧರಿಸಲಿದೆ.
ಎಸ್ ಎಂ ಕೃಷ್ಣ ಸಿದ್ದರಾಮಯ್ಯ ನವರ ಹೇಳಿಕೆಗೆ ಟೀಕಿಸಿರುವ ವಿಚಾರವಾಗಿ ಮಾತನಾಡಿದ ಸಚಿವರು ಎಸ್ ಎಂ ಕೃಷ್ಣ ಅವರು ನಮ್ಮ ಪಕ್ಷದಲ್ಲೇ ಇದ್ದವರು. ಅವರ ಅನುಭವದ ಮೇಲೆ ಸಲಹೆಯನ್ನ ನೀಡಿದ್ದಾರೆ ಎಸ್.ಎಂ ಕೃಷ್ಣ ಅವರ ಮೇಲೆ ನಮಗೂ ಗೌರವವಿದೆ. ಪರೋಕ್ಷವಾಗಿ ಎಸ್ ಎಂ ಕೃಷ್ಣ ಅವರನ್ನ ಮಂಕಾಳು ವೈದ್ಯ ಸಮರ್ಥಿಸಿಕೊಂಡಿದ್ದಾರೆ.
ಮಾಜಿ ಸಚಿವ ಈಶ್ವರಪ್ಪ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ ಎನ್ನುವ ಹೇಳಿಕೆ ನೀಡಿದ್ದು, ಇದಕ್ಕೆ ಉತ್ತರಿಸಿದ ಸಚಿವರು ಈಶ್ವರಪ್ಪನವರಿಗೆ ಮೊದಲು ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡಲು ತಿಳಿಸಿ.ವಿರೋಧ ಪಕ್ಷದ ನಾಯಕರೇ ಮಾಡಲು ಆಗದಿದ್ದವರು ನಮ್ಮ ಮೇಲೆ ಏನು ಟೀಕೆ ಮಾಡುತ್ತಾರೆ. ಅವರ ಆಡಳಿತದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಕಾರ್ಯಕರ್ತರ ವರೆಗೆ ಒಂದು ಸತ್ಯ ಹೇಳಲಿಲ್ಲ ಈಗ ಚುನಾವಣೆ ಬಂದಿದೆ, ಈಗ ಯಾರನ್ನಾದರು ಕೊಲೆ ಮಾಡದೇ ಇದ್ದರೇ ಸಾಕು ಎನ್ನುವ ಮೂಲಕ ಬಿಜೆಪಿ ವಿರುದ್ದ ಮಂಕಾಳ ವೈದ್ಯ ಕಿಡಿಕಾರಿದ್ದಾರೆ.