suddibindu.in
Honnavra: ಹೊನ್ನಾವರ : ಹೊದ್ಯೆ ಶಿರೂರಿನ ಸರಕಾರಿ ಪ್ರೌಢಶಾಲೆಯ ಶಿಕ್ಷಕನೋರ್ವ ಅದೇ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಓರ್ವಳಿಗೆ ಮಾನಸಿಕವಾಗಿ ಕಿರುಕಿಳ ನೀಡುತ್ತಿರುವ ಬಗ್ಗೆ ವಿದ್ಯಾರ್ಥಿನಿ ಪಾಲಕರು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿದ್ದು, ತಕ್ಷಣ ಶಿಕ್ಷಕರನ್ನ ಅಮಾನತು, ಇಲ್ಲವೇ ವರ್ಗಾವಣೆ ಮಾಡದೆ ಹೋದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಸರಕಾರಿ ಪ್ರೌಢಶಾಲೆ ಹೊದ್ಯೆ ಶಿರೂರು ಇಲ್ಲಿ 10ನೇ ತರಗತಿಯಲ್ಲಿ ಓದುತ್ತಿರಯವ ವಿದ್ಯಾರ್ಥಿನಿ. “ಪಾಲಕರು ಹಾಗೂ ಪೋಷಕರ ಸಭೆ ಕರೆದಾಗ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆಯನ್ನು ನೀಡದಿರುವುದು ಮತ್ತು ಇನ್ನಿತರ ವಿಷಯಗಳ ಬಗ್ಗೆ ಆ ವಿದ್ಯಾರ್ಥಿನಿ ಪಾಲಕರು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.
ಆ ದಿನಗಳಿಂದ ಶಾಲೆಯ ಮುಖ್ಯ ಶಿಕ್ಷಕರಾದ ವಿನಾಯಕ ಅವಧಾನಿ ಸರ್ ಅವರು ವಿದ್ಯಾರ್ಥಿನಿಗೆ ತರಗತಿ ಪಾಠ ಮಾಡುವಾಗ ಹಾಗೂ ಪ್ರಾರ್ಥನಾ ಸಂದರ್ಭದಲ್ಲಿ “ಮೊಬೈಲ್ ರಾಣಿ” ಹಾಗೂ “ಮೊಬೈಲ್ ಹ್ಯಾಕರ್” ಎಂದು ಸಂಭೋದಿಸಿ ಹೀಯಾಳಿಸಿ ಮಾತನಾಡುವುದಲ್ಲದೇ ಮಾನಸಿಕವಾಗಿ ತೊಂದರೆಯನ್ನು ಕೊಡುತ್ತಿದ್ದಾರೆ ಎನ್ನಲಾಗಿದೆ.
ಫೆಬ್ರವರಿ 16 ರಂದು “10ನೇ ತರಗತಿಯ ಪಾಲಕ ಪೋಷಕ” ಸಭೆಯಲ್ಲಿ ವೈಯಕ್ತಿಕವಾಗಿ ನನಗೆ “ಕಿರಿಕ್ ಪಾರ್ಟಿ” ಎಂದು ಹೇಳಿ ನಿಂದಿಸಿರುತ್ತಾರೆ. ಹಾಗೂ ನನ್ನ ಮಗಳಿಗೆ ತುಂಬಿದ ಸಭೆಯಲ್ಲಿ ಎದ್ದು ನಿಲ್ಲಿಸಿ ಪ್ರಗತಿಯ ಬಗ್ಗೆ ಚರ್ಚೆ ಮಾಡುವ ನೆಪದಲ್ಲಿ ಬಾಯಿಗೆ ಬಂದಂತೆ ನಿಂದಿಸಿರುತ್ತಾರೆ.ನನ್ನ ಮೇಲಿರುವ ದ್ವೇಷವನ್ನು ನನ್ನ ಮಗಳ ಮೇಲೆ ತೆಗೆಯುತ್ತಿರುವ ಪರಿಣಾಮ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ ಹೆದರಿ ವಿದ್ಯಾರ್ಥಿನಿ ಶಾಲೆಗೆ ಹೋಗುತ್ತಿಲ್ಲ. ಅಷ್ಟೆ ಅಲ್ಲದೆ ಈ ಮುಖ್ಯ ಶಿಕ್ಷಕರು ಶಾಲೆಯಲ್ಲಿರುವವರೆಗೂ ಶಾಲೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿರುತ್ತಾಳೆ.