ಸುದ್ದಿಬಿಂದು ಬ್ಯೂರೋ
ಕಾರವಾರ : ನಡುರಸ್ತೆಯಲ್ಲೇ ಯುವಕ. ನೋರ್ವನಿಂದ ಚಾಕು ಇರಿತ(stabbing)ಉಂಟಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ(uttara Kannda) ಕಾರವಾರ ನಗರದ(Karwar city) ಹೈಚರ್ಚ ರಸ್ತೆಯಲ್ಲಿ ರಾತ್ರಿ ವೇಳೆ ಈ ಘಟನೆ ನಡೆದಿದೆ.

ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದ್ದು ಒಂದು ಗುಂಪಿನಲ್ಲ ಇದ್ದ ಯುವಕ ತನ್ನ ಬಳಿ ಇದ್ದ ಚಾಕುವಿನಿಂದ ಇನ್ನೊಂದು ಗುಂಪಿನಲ್ಲಿದ್ದ ಯುವಕನಿಗೆ ಇರಿದಿದ್ದಾನೆ. ಸುಮಾರು ಅರ್ಧಗಂಟೆಗು ಹೆಚ್ಚಿನ ಸಮಯ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಗಲಾಟೆ ನಡೆಯುತ್ತಿರುವ ಬಗ್ಗೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದಿದ್ದು, ಪೊಲೀಸರನ್ನ ಕಂಡ ತಕ್ಷಣ ಚಾಕು ಇರಿದ ಯುವಕ ಪರಾರಿಯಾಗಿದ್ದಾನೆ‌‌. ಗಲಾಟೆಯಲ್ಲಿದ್ದ ಕೆಲವು ಯುವಕನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಇನ್ನೂ ಚಾಕು ಇರಿತದಿಂದಾಗಿ ಗಾಯಗೊಂಡಿರುವ ಇಬ್ಬರೂ ಯುವಕರನ್ನ ಕಾರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಂಪು ಘರ್ಷಣೆಗೆ ಕಾರಣ ಏನು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.