ಸುದ್ದಿಬಿಂದು ಬ್ಯೂರೋ
ಗೋಕರ್ಣ : ಇಲ್ಲಿನ ಹೋಮ್ ಸ್ಟೇವೊಂದರಲ್ಲಿ ಉಳಿದುಕೊಂಡ ಯುವತಿ ಬಾತರೂಮ್‌ನ ಸ್ನಾನ ಮಾಡುತ್ತಿದ್ದ ವೇಳೆ ಆಕೆ ಸ್ನಾನ ಮಾಡುತ್ತಿದ್ದಾಗ ಕಿಟಕಿಯಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದ ಹೋಮ್ ಸ್ಟೇ ಯುವಕನ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಉತ್ತರಕನ್ನಡ ಜಿಲ್ಲೆಯ(uttara Kannada) ಗೋಕರ್ಣ(Gokarna) ಪೊಲೀಸರು ಯುವಕನ ಬಂಧನ ಮಾಡಿದ್ದಾರೆ.

ಅಂಕೋಲಾದ ದರ್ಶನ ರಾಮಾ ಗೌಡ ಬಂಧಿತ ಯುವಕನಾಗಿದ್ದಾನೆ . ಬೆಂಗಳೂರಿನಿಂದ(Bangalor)ಇಬ್ಬರೂ ಯುವತಿಯರು ಹಾಗೂ 6 ಮಂದಿ ಯುವಕರು ಸೇರಿ ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಇವರೆಲ್ಲರೂ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿರುವ(Kudle Beach,) ಹೋಮ್ ಸ್ಟೇವೊಂದರಲ್ಲಿ ಉಳಿದುಕೊಂಡಿದ್ದರು.

ತಡರಾತ್ರಿ 1 ಗಂಟೆಯ ಸುಮಾರಿಗೆ ಸ್ನಾನ ಮಾಡಲು ಬಾತರೂಮ್‌ಗೆ ಹೋಗಿದ್ದು. ಈ ವೇಳೆ ಹೋಮ್ ಸ್ಟೇದಲ್ಲಿ ಕೆಲಸಕ್ಕಿದ್ದ ಅಂಕೋಲಾ ದರ್ಶನ ರಾಮಾ ಗೌಡ ಬಾತರೂಮ್‌ನ ಕಿಡಕಿಯಲ್ಲಿ ತನ್ನ ಮೊಬೈಲ್ ಇಟ್ಟು ಸ್ನಾನ ಮಾಡುವ ದೃಶ್ಯವನ್ನು ಸೆರೆ ಹಿಡಿದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ಹೋಮ್ ಸ್ಟೇನ(Home Stay)ಡಾ. ಶ್ಯಾಮ್ ದಯಾಲ್ ವಾಸುದೇವನ ನಾಯರ ಸಂತ್ರಸ್ತ ಯುವತಿಯ ಪರವಾಗಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ‌. ದೂರು ದಾಖಲಿಸಿಕೊಂಡಿರುವ ಗೋಕರ್ಣ ಪೊಲೀಸ್ ಠಾನೆಯ ಪಿಎಸೈ ಸುಧಾ ಅಘನಾಶಿನಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ