ಸುದ್ದಿಬಿಂದು ಬ್ಯೂರೋ
ಅಂಕೋಲಾ: ಆಪರೇಷನ್ ಕಮಲ(Operation BJP) ವಿಚಾರ ಪ್ರಜಾಪ್ರಭುತ್ವಕ್ಕೆ ಮೋಸ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಪ್ರಜಾಪ್ರಭುತ್ವವನ್ನ ಅಶಕ್ತಗೊಳಿಸುವ ಕೆಲಸದಲ್ಲಿ ಬಿಜೆಪಿ ಮುಂದಿದೆ.ಆದ್ರೆ ನಮ್ಮ ಕಾಂಗ್ರೆಸ್ (Congress) ಶಾಸಕರು ಯಾವುದೆ ಕಾರಣಕ್ಕೂ ಬಿಜೆಪಿ ತೆಕ್ಕೆಗೆ ಹೋಗಲಾರರು ನಮ್ಮ ಶಾಸಕರು ಗಟ್ಟಿಯಾಗಿದ್ದಾರೆ. ಎಂದು ಕಾನೂನು ಸಚಿವರಾಗಿರುವ ಎಚ್.ಕೆ.ಪಾಟೀಲ್ ಅವರು ಹೇಳಿಕೆ ನೀಡಿದ್ದರು.
ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದ ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಎಚ್ ಕೆ ಪಾಟೀಲ್(Minister HK Patil) ಅವರು ಡಿಕೆಶಿ(D K Shivakumar)ಮುಖ್ಯಮಂತ್ರಿ ಆಗ್ತಾರೆ ಎನ್ನುವ ವಿಚಾರವಾಗಿ ಮಾತನಾಡಿದ ಸಚಿವರು ಯಾರ ಯಾರು ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎನ್ನೋದು ಹೈ ಕಾಮಾಂಡ್ ಗೆ ಬಿಟ್ಟ ವಿಚಾರವಾಗಿದೆ..
ಕೆಲವು ಶಾಸಕರು ಪದೆ ಪದೆ ಮಾಧ್ಯಮ ಮುಂದೆ ಬಂದು ಹೇಳಿಕೆ ನೀಡುವದನ್ನ ಬಿಡಬೇಕು. ಪಕ್ಷದಲ್ಲಿನ ವಿಚಾರವನ್ನ ಪಕ್ಷದ ಹೈ ಕಮಾಂಡ್ ಜತೆ ಚರ್ಚೆ ಮಾಡಬೇಕು ಮಾದ್ಯಮದ ಮುಂದೆ ಅಲ್ಲ ಎಂದ ಪಾಟೀಲ್. ಪರಮೇಶ್ವರ ಮನೆಯಲ್ಲಿ ಔತಣಕೂಟಾದ ವಿಚಾರಕ್ಕೆ ಯಾವುದೇ ರಾಜಕೀಯ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ. ಆಗಾಗ ಅವರ ಮನೆಯಲ್ಲಿ ಔತಣ ಕೂಟಾ ನಡೆಯುತ್ತಿರುತ್ತದೆ ಎಂದರು.