ಸುದ್ದಿಬಿಂದು ಬ್ಯೂರೋ
ಯಲ್ಲಾಪುರ : ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಖಂಡರೆ ನನ್ನ ಸೋಲಿಸಲು ರಣತಂತ್ರ ಹೆಣೆದಿದ್ದರು.ಈ ಬಗ್ಗೆ ರಾಜ್ಯ ಹೈಕಮಾಂಡಗೆ ದೂರು ನೀಡಿದ್ದೇನೆ.ಆದರೆ ಇದುವರೆಗೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ಅಸಮಧಾನ ಇದ್ದೆ ಇದೆ ಎನ್ನುವ ಮೂಲಕ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರು ಪರೋಕ್ಷವಾಗಿ ಪಕ್ಷ ಬಿಡುವ ಸುಳಿವು ನೀಡಿದಂತಿದೆ.

ಮಾಧ್ಯಮವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ , ವಿರೋಧ ಪಕ್ಷದವರ ಜೊತೆ ಕೈ ಜೋಡಿಸಿ ನನ್ನ ಸೋಲಿಸಬೇಕು ಎಂದು ಸಾಕಷ್ಟು ಪ್ರಯತ್ನ ಮಾಡಿದ್ದರು‌. ಯಾರೇಲ್ಲಾ ಪಕ್ಷದ ಅಭ್ಯರ್ಥಿಯನ್ನ ಸೋಲಿಸುವ ಪ್ರಯತ್ನ ಮಾಡಿದ್ದಾರೆ ಎನ್ನುವುದು ಚುನಾವಣೆ ಮುಗಿದ ಬಳಿಕ ಗೊತ್ತಾಗಿದೆ. ಅವರೆಲ್ಲರ ಹೆಸರನ್ನ ರಾಜ್ಯ ಹೈ ಕಮಾಂಡ್ ಗೆ ದೂರು ನೀಡಿದ್ದೆನೆ.ಆದರೆ ಇದುವರೆಗೂ ಅವರ ವಿರುದ್ದ ಕ್ರಮವಾಗಿಲ್ಲ ಬದಲಾಗಿ ಅವರನ್ನ ಪೋಷಿಸುವ ಕೆಲಸವಾಗುತ್ತಿದೆ.

ಸ್ವಪಕ್ಷದ ಅಭ್ಯರ್ಥಿಯನ್ನ ಸೋಲಿಸುವ ಪ್ರಯತ್ನಕ್ಕೆ ಕೈ ಹಾಕಿದವರ ವಿರುದ್ದ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ದ ಬಿಜೆಪಿ ರಾಜ್ಯ ಹೈಕಮಾಂಡ್ ಕ್ರಮ ತೆಗೆದುಕೊಳ್ಳಿರೋದು ಅಸಮಧಾನ ತಂದಿದೆ. ಆ ಕುರಿತು ಶಿಸ್ತು ಕ್ರಮತೆಗೆದುಕೊಳ್ಳದೆ ಹೋಗಿದ್ದರೆ. ಮುಂದೇನು ಮಾಡಬೇಕು ಎನ್ನುವ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ‌. ಆದರೆ ಈಗ ನಾನು ಬಿಜೆಪಿ ಪಕ್ಷದ ಶಾಸಕ ಬಿಜೆಪಿ ಯಲ್ಲೆ ಉಳಿತೆನೆ. ಎನ್ನುವ ಮೂಲಕ ಅಸಮಧಾನ ಹೊರಹಾಕಿದ್ದಾರೆ.