ಬೆಂಗಳೂರು : ರಾಜ್ಯದಲ್ಲಿರುವ 1.28 ಕೋಟಿ (1.28 crore) ರೇಷನ್ ಕಾರ್ಡಧಾರರ ಪೈಕಿ ಒಂದು ಕೋಟಿ ರೇಷನ್ ಕಾರ್ಡಧಾರರಿಗೆ ಉಚಿತ ಅಕ್ಕಿಯ ಬದಲಾಗಿ ಕೊಡುವ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ( KH Muniappa, Food Minister) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಗುಣಮಟ್ಟದ ಪಡಿತರ ಪೂರೈಕೆಯತ್ತ ಗಮನ ಹರಿಸಬೇಕೆಂದು ಸೂಚಿಸಿದರು. 28 ಲಕ್ಷ ಪಡಿತರ ಕಾರ್ಡಗಳು ಅನರ್ಹಗೊಂಡಿದ್ದರಿಂದ ಮತ್ತು ಇನ್ನು ಕೆಲವು ಜನರಿಗೆ ತಾಂತ್ರಿಕ ದೋಷ ಇರೋ ಕಾರಣಕ್ಕೆ ಹಣ ವರ್ಗಾವಣೆ ಮಾಡಿಲ್ಲ ಎಂದು ಮುನಿಯಪ್ಪ ತಿಳಿಸಿದರು.
ಅನ್ನ ಭಾಗ್ಯ ಯೋಜನೆ ಸಮರ್ಪಕವಾಗಿ ಜಾರಿಗೆ ತರಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು. ಪಡಿತರವನ್ನು ಕಳ್ಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ನಿರ್ಧಾಕ್ಷಿಣ ಕ್ರಮ ಕೈಗುಳುವಂತೆ ಅಧಿಕಾರಿಗಳಿಗೆ ನಿರ್ದೇಸಿದರು.